ಅಯೋಧ್ಯೆ ತೀರ್ಪು ಟೀಕಿಸಿದ ಅಧ್ಯಾಪಕನ ಅಮಾನತು

Update: 2019-11-29 17:19 GMT
PTI

ಅಲಿಗಢ, ನ. 29: ಅಯೋಧ್ಯೆ ತೀರ್ಪು ಟೀಕಿಸಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಸೆಂಟರ್ ಫಾರ್ ಪ್ರಮೋಷನ್ ಆಫ್ ಎಜುಕೇಶನಲ್ ಆ್ಯಂಡ್ ಕಲ್ಚರಲ್ ಅಡ್ವಾನ್ಸ್‌ಮೆಂಟ್ ಆಫ್ ಮುಸ್ಲಿಂ ಆಫ್ ಇಂಡಿಯಾ (ಸಿಪಿಇಸಿಇಎಎಂ)ದ ನಿರ್ದೇಶಕನ ಸ್ಥಾನದಿಂದ ಅಲಿಗಢ ಮುಸ್ಲಿಂ ವಿಶ್ವಾವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಖ್ಯಾತ ಇಸ್ಲಾಂ ಬೋಧಕ ರಶೀದ್ ಶಾಝ್ ಅವರನ್ನು ವಜಾ ಮಾಡಲಾಗಿದೆ.

 ನವೆಂಬರ್ 21ರಂದು ಅಧಿಸೂಚನೆ ಹೊರಡಿಸಿರುವ ಉಪ ಕುಲಪತಿ, ಕೂಡಲೇ ಅಸ್ತಿತ್ವಕ್ಕೆ ಬರುವಂತೆ ಡಾ. ಶಾಝ್ ಬದಲಿಗೆ ನಸೀಮ್ ಅಹ್ಮದ್ ಖಾನ್ ಅವರನ್ನು ನಿರ್ದೇಶಕರ ಹುದ್ದೆಗೆ ನಿಯೋಜಿಸಿದ್ದಾರೆ. ಹುದ್ದೆಯಿಂದ ಡಾ. ಶಾಝ್ ಅವರನ್ನು ವಜಾಗೊಳಿಸಿರುವುದಕ್ಕೆ ಅಧಿಸೂಚನೆಯಲ್ಲಿ ಯಾವುದೇ ಕಾರಣ ನೀಡಿಲ್ಲ. ಆದರೆ, ಅಯೋಧ್ಯೆ ಕುರಿತು ಹೇಳಿಕೆ ನೀಡಿರುವುದಕ್ಕೆ ಅವರನ್ನು ವಜಾಗೊಳಿಸಲಾಗಿದೆ ಎಂಬ ವದಂತಿ ಇದೆ.

ಸುಪ್ರೀಂ ಕೋರ್ಟ್ ಅಯೋಧ್ಯೆ ಭೂ ವಿವಾದದ ಕುರಿತು ತೀರ್ಪು ನೀಡುವ ಮುನ್ನ ಉಪ ಕುಲಪತಿ ನೋಟಿಸು ಜಾರಿ ಮಾಡಿ, ಈ ವಿಷಯದ ಕುರಿತು ಯಾರೂ ಹೇಳಿಕೆ ನೀಡಬಾರದು ಎಂದು ನಿರ್ದೇಶಿಸಿದ್ದರು. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಹೇಳಿಕೆ ನೀಡಲು ಹಕ್ಕು ಇಲ್ಲದೇ ಇದ್ದರೆ, ನಿಮಗೆ ಇಂತಹ ನೋಟಿಸು ಜಾರಿಗೊಳಿಸುವ ಹಕ್ಕು ಕೂಡ ಇಲ್ಲ. ಎಲ್ಲೆಡೆ ಮೌನ ಇತ್ತು. ಅದ್ಯಾಪಕರ ಅಸೋಸಿಯೇಶನ್ ಕೂಡ ಯಾವುದೇ ಹೇಳಿಕೆ ನೀಡಲಿಲ್ಲ. ಆದುದರಿಂದ ನಾನು ಹೇಳಿಕೆ ನೀಡಿದೆ ಎಂದು ಡಾ. ಶಾಝ್ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಕುರಿತು ಡಾ. ಶಾಝ್ ಮಾಡಿದ ಭಾಷಣ ಯುಟ್ಯೂಬ್‌ನಲ್ಲಿ ‘ರಶೀದ್ ಶಾಝ್ ಆನ್ ಸುಪ್ರೀಂ ಕೋರ್ಟ್ ಜಡ್ಜ್‌ಮೆಂಟ್-2019 ಬಾಬ್ರಿ ಮಸ್ಜಿದ್ ಆ್ಯಂಡ್ ರಾಮಮಂದಿರ್’ ಎಂಬ ಶೀರ್ಷಿಕೆಯಲ್ಲಿ ಲಭ್ಯವಿದೆ.

ಭಾಷಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಸಂಪೂರ್ಣ ನ್ಯೂನತೆಯಿಂದ ಕೂಡಿದೆ ಎಂದು ಡಾ. ಶಾಝ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News