ನಂಬರ್ ಪ್ಲೇಟ್ ಇಲ್ಲದ ಕಾರಿಗೆ 10 ಲಕ್ಷ ರೂ. ದಂಡ

Update: 2019-11-30 09:28 GMT
ಸಾಂದರ್ಭಿಕ ಚಿತ್ರ

ಅಹ್ಮದಾಬಾದ್ : ಸುಮಾರು 2 ಕೋಟಿ ರೂ. ವೆಚ್ಚದ ಪೋರ್ಷೆ 911 ಸ್ಪೋರ್ಟ್ ಕಾರಿನ ಮಾಲಿಕನ ಬಳಿ ವಾಹನದ ಕುರಿತಾದ ಸೂಕ್ತ ದಾಖಲೆಗಳು ಹಾಗೂ ಕಾನೂನು ಬದ್ಧ ನಂಬರ್ ಪ್ಲೇಟ್ ಇಲ್ಲವೆಂಬ ಕಾರಣ ನೀಡಿ ಅಹ್ಮದಾಬಾದ್ ಪ್ರಾದೇಶಿಕ ಸಾರಿಗೆ ಕಚೇರಿ ಆತನಿಗೆ 9.8 ಲಕ್ಷ ರೂ. ದಂಡ ಹೇರಿದೆ. ವಾಹನವನ್ನು ಸಂಚಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.

ಇಲ್ಲಿನ ಹೆಲ್ಮೆಟ್ ಕ್ರಾಸ್ ರೋಡ್‍ನಲ್ಲಿ ಸಂಚಾರಿ ಪೊಲೀಸರು ಸಿಲ್ವರ್ ಬಣ್ಣದ ಈ ಕಾರನ್ನು ಬುಧವಾರ ತಡೆದು ನಿಲ್ಲಿಸಿದ್ದರು. ಈ ಸಂದರ್ಭ ಅದರಲ್ಲಿ ನಂಬರ್ ಪ್ಲೇಟ್ ಇರಲಿಲ್ಲ ಎಂದು ಡಿಸಿಪಿ ತೇಜಸ್ ಪಟೇಲ್ ಹೇಳಿದ್ದಾರೆ.

ವಾಹನವನ್ನು ಮಾಲಕ ಮರಳಿ ಪಡೆಯಬೇಕಿದ್ದರೆ ದಂಡ ಮೊತ್ತವನ್ನು ಆರ್ ಟಿಒಗೆ ಪಾವತಿಸಿ ಅದರ ರಶೀದಿಯೊಂದಿಗೆ ಠಾಣೆಗೆ ಬರಬೇಕು ಎಂದು ಪಟೇಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News