×
Ad

ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ: ಬಂದೂಕು ಹೊರತೆಗೆದ 'ಕೈ' ಅಭ್ಯರ್ಥಿ

Update: 2019-11-30 16:49 IST

ರಾಂಚಿ: ಜಾರ್ಖಂಡ್‍ನ ಪಲಮು ಜಿಲ್ಲೆಯ ದಾಲ್ತೊಂಗಂಜ್ ವಿಧಾನಸಭಾ ಕ್ಷೇತ್ರದ ಕೊಶಿಯಾರ ಮತಗಟ್ಟೆಯೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್. ತ್ರಿಪಾಠಿ ಬಂದೂಕು ತೋರಿಸಿದ ಘಟನೆ ನಡೆದಿದೆ. ತ್ರಿಪಾಠಿ ಅವರ ಬೆಂಬಲಿಗರು ಬಿಜೆಪಿ ಅಭ್ಯರ್ಥಿ ಅಲೋಕ್ ಚೌರಾಸಿಯಾ ಅವರೊಂದಿಗೆ ಸಂಘರ್ಷಕ್ಕಿಳಿದ ನಂತರ ತ್ರಿಪಾಠಿ ತಮ್ಮ ಪಿಸ್ತೂಲು ಹೊರತೆಗೆದು ತೋರಿಸಿದ್ದಾರೆ.

ತ್ರಿಪಾಠಿ ಅವರು ಕೋಶಿಯಾರ ಎಂಬಲ್ಲಿನ ಶಾಲೆಯಲ್ಲಿರುವ ಬೂತ್ ಸಂಖ್ಯೆ 72 ಹಾಗೂ 73ಗೆ ಆಗಮಿಸಿದ ನಂತರ ಬಿಜೆಪಿ ಬೆಂಬಲಿಗರು ತ್ರಿಪಾಠಿ ಬೆಂಬಲಿಗರ ವಾಹನಗಳ ಮೇಲೆ ಕಲ್ಲುಗಳಿಂದ ದಾಳಿ ನಡೆಸಿದ್ದರು. ಈ ಸಂದರ್ಭ ತ್ರಿಪಾಠಿ ಪಿಸ್ತೂಲು ಹೊರತೆಗೆದ ವೀಡಿಯೋ ಇದೀಗ ವೈರಲ್ ಆಗಿದೆ. ಚೌರಾಸಿಯಾ ಅವರ ಬೆಂಬಲಿಗರು ತ್ರಿಪಾಠಿಯನ್ನು ಅಲ್ಲಿಂದ  ಓಡಿಸಿದರೂ ಅವರ ಅಂಗರಕ್ಷಕರು ಅವರನ್ನು ಹೇಗಾದರೂ ಅಲ್ಲಿಂದ ದೂರ ಕಳುಹಿಸುವಲ್ಲಿ ಸಫಲರಾದರು.

ಘಟನೆ ನಡೆದ ಸ್ಥಳ ಬಿಜೆಪಿ ಅಭ್ಯರ್ಥಿ ಚೌರಾಸಿಯಾ ಅವರ ಭದ್ರಕೋಟೆಯೆಂದು ಹೇಳಲಾಗಿದೆ. ಘಟನೆ ನಂತರ ಇಬ್ಬರು ನಾಯಕರೂ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಆಡಳಿತ ಪಕ್ಷ ತಮ್ಮ ಕ್ಷೇತ್ರದ ಎಂಟು ಬೂತುಗಳನ್ನು ವಶಪಡಿಸಿಕೊಂಡಿದೆ ಎಂದು ತ್ರಿಪಾಠಿ ಆರೋಪಿಸಿದರೆ, ಕಾಂಗ್ರೆಸ್ ನಾಯಕರು ಮತದಾರರನ್ನು ಬೆದರಿಸಲು ಯತ್ನಿಸುತ್ತಿದ್ದರು ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ರಾಜ್ಯ ಚುನಾವಣಾ ಆಯೋಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ ಹಾಗೂ ಪಲಮು ಜಿಲ್ಲಾಡಳಿತದಿಂದ ವರದಿ ಕೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News