ಪ್ಯಾರಿಸ್ ರೈಲು ನಿಲ್ದಾಣದಲ್ಲಿ ಸ್ಫೋಟಕ ಪತ್ತೆ

Update: 2019-11-30 15:48 GMT

ಪ್ಯಾರಿಸ್, ನ. 30: ಪ್ಯಾರಿಸ್‌ನಲ್ಲಿರುವ ಯುರೋಪ್‌ನ ಅತಿ ಹೆಚ್ಚು ಚಟುವಟಿಕೆಯ ರೈಲು ನಿಲ್ದಾಣ ಗ್ಯಾರ್ ಡು ನೊರ್ಡ್‌ನಲ್ಲಿ ಶುಕ್ರವಾರ ಪ್ರಯಾಣಿಕನೊಬ್ಬನ ಚೀಲದಲ್ಲಿ ನಿಷ್ಕ್ರಿಯ ಸ್ಫೋಟಕವೊಂದು ಪತ್ತೆಯಾಗಿದೆ. ಬಳಿಕ, ಪೊಲೀಸರು ನಿಲ್ದಾಣವನ್ನು ಆಂಶಿಕವಾಗಿ ತೆರವುಗೊಳಿಸಿದರು.

ನಿಲ್ದಾಣದಲ್ಲಿ ಡಿಢೀರ್ ತಪಾಸಣೆಯ ಸಂದರ್ಭದಲ್ಲಿ ಸ್ಪೋಟಕವು ಪತ್ತೆಯಾಯಿತು. ಲಂಡನ್, ಬೆಲ್ಜಿಯಮ್, ಜರ್ಮನಿ ಮತ್ತು ನೆದರ್‌ಲ್ಯಾಂಡ್ಸ್‌ನ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲುತ್ತವೆ.

ಸ್ಫೋಟಕವನ್ನು ಹೊಂದಿದ್ದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನು ಸೈನಿಕನಾಗಿದ್ದನು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News