'ಸಂಘಟನೆಗಳಿಂದ ಸಮಾಜದವನ್ನು ಒಗ್ಗೂಡಿಸಲು ಸಾಧ್ಯ'

Update: 2019-12-01 10:51 GMT

ಕಾರ್ಕಳ: ಸಂಘಟನೆ ಹಾಗೂ ಕೂಟಗಳನ್ನು ಏರ್ಪಡಿಸುವುದರಿಂದ ಸಮಾಜವನ್ನು ಮತ್ತೇ ಒಗ್ಗೂಡಿಸಲು ಸಾಧ್ಯ. ಸಮಾಜ ಬಲಷ್ಠವಾಗಬೇಕಾದರೆ ಸಮಾಜದ ಯುವ ಶಕ್ತಿಗಳು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ  ಸಾಧನೆ ಮಾಡಬೇಕು ಎಂದು ಮೆಸ್ಕಾಂ ಇಲಾಖೆಯ ನಿವೃತ್ತ ಇಂಜಿನಿಯರ್ ಸತೀಶ್ ಹೇಳಿದರು. 

ನಗರದ ಸ್ವರಾಜ್ ಮೈದಾನದಲ್ಲಿ ಕಾರ್ಕಳ ತಾಲೂಕು ರಾಮಕ್ಷತ್ರಿಯ ಕ್ರೀಡಾಕೂಟದ ವತಿಯಿಂದ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಕ್ರಿಕೆಟ್ ಕ್ರೀಡಾಕೂಟವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಬಿ.ಜಗದೀಶ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಕ್ರೀಡಾ ಕೂಟದಲ್ಲಿ ಪಾಲ್ಗೊಂಡುವುದರಿಂದ ದೈಹಿಕ ಹಾಗೂ ಮಾನಸಿಕ ಸದೃಢತೆ ಹೊಂದಲು ಸಾಧ್ಯ. ಕ್ರೀಡಾ ಕೂಟ ಆಯೋಜನೆಯಿಂದ ಸಮಾಜದ ತೆರೆಮರೆಯಲ್ಲಿರುವ ಪ್ರತಿಭಾವಂತರನ್ನು ಗುರುತಿಸಲು ಸಹಕಾರಿಯಾಗಲಿದೆ ಎಂದರು. 
ಕಾರ್ಕಳ ಪುರಸಭೆಯ ಕೌನ್ಸಿಲರ್ ಪಲ್ಲವಿ ಪ್ರವೀಣ್ ಉಪಸ್ಥಿತರಿದ್ದರು.

ವಿಜೇತಾ ಅಂಡಾರು ಪ್ರಾರ್ಥನೆಗೈದರು. ಕಾರ್ಕಳ ತಾಲೂಕು ರಾಮ ಕ್ಷತ್ರೀಯ ಕ್ರೀಡಾ ಕೂಟದ ಅಧ್ಯಕ್ಷಕ ಗುರುಪ್ರಸಾದ್ ರಾವ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಸಂಘದ ಒಗ್ಗೂಡುವಿಕೆ ಹಾಗೂ ಕಾರ್ಯ ಚಟುವಟಿಕೆಯ ಬಗ್ಗೆ ಮಾತನಾಡಿದ ಸಹಕಾರ ಕೋರಿದರು.

ಕಾರ್ಕಳ ತಾಲೂಕು ರಾಮಕ್ಷತ್ರೀಯ ಕ್ರೀಡಾ ಕೂಟದ ಕಾರ್ಯದರ್ಶಿ ಸಂಕೇತ್ ವಂದನಾರ್ಪಣೆಗೈದರು. ಬಿ.ಮನಮೋಹನ್ ರಾವ್ ಸಂಜಯ್‍ಕುಮಾರ್ ಕಾರ್ಕಳ ನಿರೂಪಣೆಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News