ಕನ್ನಂಗಾರ್ ಉರೂಸ್ ಲಾಂಛನ, ಕರಪತ್ರ ಬಿಡುಗಡೆ

Update: 2019-12-01 10:56 GMT

ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಹೆಜಮಾಡಿಯ ಕನ್ನಂಗಾರ್ ಜುಮಾ ಮಸೀದಿಯ ಮುಂಭಾಗದಲ್ಲಿರುವ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ ದರ್ಗಾದ 2020ರ ಉರೂಸ್‍ನ ಲಾಂಛನ ಹಾಗೂ ಕರಪತ್ರ ಬಿಡುಗಡೆ ಸಮಾರಂಭವು ರವಿವಾರ ನಡೆಯಿತು.

ಮೂರು ವರ್ಷಗಳಿಗೊಮ್ಮೆ ನಡೆಯುವ ಕನ್ನಂಗಾರ್ ಉರೂಸ್ ಸಮಾರಂಭವು ಈ ಭಾರಿ 2020ರ ಫೆಬ್ರವರಿ 21ರಿಂದ 29ರವರೆಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಹಿಫ್ಲುಲ್ ಕುರ್ ಆನ್ ಕಾಲೇಜು ವಿದ್ಯಾರ್ಥಿಗಳಿಗೆ ಹಾಫಿಲ್ ಪದವಿ ಪ್ರಧಾನ ನಡೆಯಲಿದೆ.

ಕನ್ನಂಗಾರ್ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಅಶ್ರಫ್ ಸಖಾಫಿ ಕಿನ್ಯಾ, ದರ್ಗಾದಲ್ಲಿ ದುವಾ ನೆರವೇರಿಸಿದ ಬಳಿಕ  ಲಾಂಛನ ಹಾಗೂ ಕರಪತ್ರವನ್ನು ಬಿಡುಗಡೆಗೊಳಿಸಿದರು. ಉರೂಸ್ ಸಮಾರಂಭದಲ್ಲಿ ಸಾಮಾಜಿ, ಧಾರ್ಮಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಉರೂಸ್ ಸಮಿತಿಯ ಅಧ್ಯಕ್ಷ ಯು.ಕೆ.ಅಬ್ದುಲ್ ಹಮೀದ್ ಮಿಲಾಫ್ ತಿಳಿಸಿದರು. 

ಉರೂಸ್ ಸಮಿತಿಯ ಉಪಾಧ್ಯಕ್ಷ ಸನಾ ಇಬ್ರಾಹಿಮ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಿರಾಜ್ ಎಂ.ಎಸ್, ಸಂಚಾಲಕ ಶಾಹುಲ್ ಹಮೀದ್ ನಯೀಮಿ, ಕಿಫಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಪುತ್ತು, ಜಮಾತ್ ಉಪಾಧ್ಯಕ್ಷ ಸೂಫಿ ಹಾಜಿ, ಕಾರ್ಯದರ್ಶಿ ಅಬ್ದುಲ್ ಅಝೀಝ್, ಅಬೂಬಕರ್ ಹಾಜಿ, ಆಸಿಮಾಕ, ಎಮ್.ಐ ಮುಹಮ್ಮದ್, ಬಿ.ಕೆ.ಮೊಹಮ್ಮದ್, ಹನೀಫ್ ಕನ್ನಂಗಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News