ಹೆಜಮಾಡಿಯಲ್ಲಿ ಮೊಗವೀರ ಬೀಚ್ ಕ್ರೀಡೋತ್ಸವ

Update: 2019-12-01 11:05 GMT

ಪಡುಬಿದ್ರಿ: ಹೆಜಮಾಡಿ ಬೀಚ್ ಫ್ರೆಂಡ್ಸ್ ವತಿಯಿಂದ ಹೆಜಮಾಡಿ ವಲಯದ ಮೊಗವೀರ ಗ್ರಾಮಸಭೆಗಳ ಮೊಗವೀರ ಕ್ರೀಡಾಕೂಟ ರವಿವಾರ ನಡೆಯಿತು.

ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶಾಲಕ್ಷಿ ಉಮೇಶ್ ಪುತ್ರನ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಕಡಲ ತಡಿಯ ಮರಳಿನಲ್ಲಿ ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ನೈಜ ಕ್ರೀಡಾ ಪ್ರತಿಭೆ ಬೆಳಕಿಗೆ ಬರಲು ಸಾಧ್ಯವಿದೆ ಎಂದರು. 

ಹೆಜಮಾಡಿ ಏಳೂರು ಮೊಗವೀರ ಮಹಾಸಭಾ ಅಧ್ಯಕ್ಷ ಸದಾಶಿವ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸಂಘಟನೆಗಳು ಬಲಯುತಗೊಳ್ಳಲು ಇಂತಹ ಕ್ರೀಡಾ ಚಟುವಟಿಕೆಗಳು ಅತ್ಯುತ್ತಮ ವೇದಿಕೆಯಾಗಿದೆ ಎಂದರು. ಹೆಜಮಾಡಿ ಶ್ರೀ ಶನೀಶ್ವರ ಮಂಡಳಿ ಹತ್ತಿರದ ಕಡಲ ಕಿನಾರೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಪುರುಷರಿಗಾಗಿ ವಾಲಿಬಾಲ್, ಹಗ್ಗ ಜಗ್ಗಾಟ, ಬಲೆ ಬೀಸುವುದು, ಮಹಿಳೆಯರಿಗಾಗಿ ತ್ರೋಬಾಲ್, ಹಗ್ಗಜಗ್ಗಾಟ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಿತು.

ಹೆಜಮಾಡಿ ಶ್ರೀ ಶನೀಶ್ವರ ಭಜನಾ ಮಂಡಳಿಯ ಅಧ್ಯಕ್ಷ ಆನಂದ ಸುವರ್ಣ, ಗ್ರಾಮ ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ, ತಾಲ್ಲೂಕು ಪಂಚಾಯಿತಿ ಸದಸ್ಯೆ ರೇಣುಕಾ ಪುತ್ರನ್, ಹಿರಿಯ ಮೀನುಗಾರ ಮುಖಂಡ ನಾರಾಯಣ ಕೆ.ಮೆಂಡನ್, ಪಡುಬಿದ್ರಿ ಜೇಸಿಐ ಪೂರ್ವಾಧ್ಯಕ್ಷ ಹರೀಶ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯೆ ರೇಷ್ಮಾ ಮೆಂಡನ್, ಬೀಚ್ ಫ್ರೆಂಡ್ಸ್ ಗೌರವಾಧ್ಯಕ್ಷ ಯಾದವ ಕೋಟ್ಯಾನ್ ಆಚೆಮಟ್ಟು, ಅಧ್ಯಕ್ಷ ಅಕ್ಷಯ ಕೋಟ್ಯಾನ್, ಕ್ರೀಡೋತ್ಸವ ಸಮಿತಿಯ ಗೌರವಾಧ್ಯಕ್ಷ ಚಂದ್ರಕಾಂತ್ ಶ್ರೀಯಾನ್ ಮುಖ್ಯ ಅತಿಥಿಗಳಾಗಿದ್ದರು.

ಮಹೇಶ್ ಕೋಟ್ಯಾನ್ ಸ್ವಾಗತಿಸಿದರು. ಕೀರ್ತನ್ ಎಸ್.ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿ, ಅಮೃತ್ ಕೋಟ್ಯಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News