×
Ad

ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಯರನ್ನು ನೆಲದಲ್ಲಿ ಮಲಗಿಸಿದ ಸಿಬ್ಬಂದಿ

Update: 2019-12-01 23:01 IST

 ಭೋಪಾಲ, ಡಿ.1: ಮಧ್ಯಪ್ರದೇಶದಲ್ಲಿ ನಡೆದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡಿದ್ದ 37 ಮಹಿಳೆಯರನ್ನು ಶಸ್ತ್ರಚಿಕಿತ್ಸೆಯ ಬಳಿಕ ನೆಲದಲ್ಲೇ ಮಲಗಿಸಿದ ಘಟನೆ ವರದಿಯಾಗಿದೆ.

ಭೋಪಾಲದಿಂದ ಸುಮಾರು 50 ಕಿ.ಮೀ ದೂರದ ವಿದಿಷಾ ಗ್ರಾಮದ ಲಾಟೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಹಾಸಿಗೆಯ ಕೊರತೆಯಿದ್ದ ಕಾರಣ ಮಹಿಳೆಯರು ನೆಲದಲ್ಲೇ ಮಲಗಿ ವಿಶ್ರಾಂತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

 ಆದರೆ ಆಸ್ಪತ್ರೆಗೆ ಅಗತ್ಯವಿರುವಷ್ಟು ಹಾಸಿಗೆಗಳನ್ನು ಒದಗಿಸಲಾಗಿದ್ದು ಆಸ್ಪತ್ರೆಯ ಸಿಬಂದಿಗಳ ಈ ರೀತಿಯ ವರ್ತನೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಕರಣದ ಮಾಹಿತಿ ದೊರೆತೊಡನೆ ವಿಭಾಗೀಯ ವೈದ್ಯಾಧಿಕಾರಿ ಡಾ ನರೇಶ್ ಬಾಫೇಲ್‌ರನ್ನು ಹುದ್ದೆಯಿಂದ ವಜಾ ಮಾಡಲಾಗಿದ್ದು ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯ ಆರೋಗ್ಯ ಮತ್ತು ವೈದ್ಯಾಧಿಕಾರಿ ಡಾ ಕೆಎಸ್ ಅಹೀರ್ವಾರ್ ಹೇಳಿದ್ದಾರೆ.

ತನಿಖಾ ವರದಿಯ ಬಳಿಕ ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಿಷ್ಟಾಚಾರ ಪಾಲಿಸದ ಬಗ್ಗೆ ಆಸ್ಪತ್ರೆಯ ಆಡಳಿತದಿಂದ ವಿವರಣೆ ಕೇಳಲಾಗುವುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News