10 ವರ್ಷಗಳಲ್ಲೇ ರೈಲ್ವೆಯಿಂದ ಅತ್ಯಂತ ಕಳಪೆ ಸಾಧನೆ

Update: 2019-12-02 16:49 GMT

ಹೊಸದಿಲ್ಲಿ,ಡಿ.2: ಭಾರತೀಯ ರೈಲ್ವೆಯ ‘ಕಾರ್ಯಾಚರಣೆ ಅನುಪಾತ’ 2017-18ನೇ ಸಾಲಿನಲ್ಲಿ ಶೇ.98.44ರಷ್ಟು ಆಗಿದ್ದು,ಇದು ಕಳೆದ 10 ವರ್ಷಗಳಲ್ಲಿಯೇ ಅತ್ಯಂತ ಕಳಪೆಯಾಗಿದೆ ಎಂದು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಸಿಎಜಿ ವರದಿಯು ತಿಳಿಸಿದೆ.

ಆದಾಯದ ಎದುರು ವೆಚ್ಚವನ್ನು ಲೆಕ್ಕ ಹಾಕುವ ಕಾರ್ಯಾಚರಣೆ ಅನುಪಾತವು ತನ್ನ ಕಾರ್ಯಾಚರಣೆಯಲ್ಲಿ ರೈಲ್ವೆಯ ದಕ್ಷತೆಯ ಪ್ರಮಾಣ ಮತ್ತು ಅದರ ಹಣಕಾಸಿನ ಆರೋಗ್ಯ ಸ್ಥಿತಿಯನ್ನು ತೋರಿಸುತ್ತದೆ.

ಶೇ.98.44 ಕಾರ್ಯಾಚರಣೆ ಅನುಪಾತ ಎನ್ನುವುದು 100 ರೂ.ಆದಾಯವನ್ನು ಗಳಿಸಲು ರೈಲ್ವೆಯು 98.44 ರೂ.ವ್ಯಯಿಸಿದೆ ಎನ್ನುವುದನ್ನು ಸೂಚಿಸುತ್ತದೆ.

ಎನ್‌ಟಿಪಿಸಿ ಮತ್ತು ಇರ್ಕಾನ್‌ನಿಂದ ಮುಂಗಡ ಹಣವನ್ನು ಸ್ವೀಕರಿಸಿರದಿದ್ದರೆ ರೈಲ್ವೆಯ ಆಯವ್ಯಯ ಪಟ್ಟಿಯು 1,665.61 ಕೋ.ರೂ.ಗಳ ಮಿಗತೆ ಮೊತ್ತವನ್ನು ತೋರಿಸುವ ಬದಲು 5,676.29 ಕೋ.ರೂ.ಗಳ ಋಣಾತ್ಮಕ ಶಿಲ್ಕನ್ನು ತೋರಿಸುತ್ತಿತ್ತು ಎಂದೂ ವರದಿಯು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News