ಭಾರತೀಯ ನೌಕಾ ಪಡೆಗೆ ಮೊದಲ ಮಹಿಳಾ ಪೈಲಟ್

Update: 2019-12-02 17:10 GMT

ಹೊಸದಿಲ್ಲಿ, ಡಿ. 2: ಕೇರಳದ ಕೊಚ್ಚಿಯಲ್ಲಿ ಕಾರ್ಯಾಚರಣೆ ತರಬೇತಿ ಪೂರ್ಣಗೊಳಿಸಿದ ಸಬ್ ಲೆಫ್ಟಿನೆಂಟ್ ಶಿವಾಂಗಿ ಅವರನ್ನು ಭಾರತೀಯ ನೌಕಾ ಪಡೆ ಸೋಮವಾರ ತನ್ನ ಮೊದಲ ಮಹಿಳಾ ಪೈಲೆಟ್ ಆಗಿ ನೇಮಿಸಿದೆ.

ಬಿಹಾರದ ಮುಝಪ್ಫರ್‌ಪುರ ಜಿಲ್ಲೆಯ ಶಿವಾಂಗಿ ನೌಕಾಪಡೆಯ ಡೋರ್ನಿಯರ್ ಕಣ್ಗಾವಲು ವಿಮಾನದ ಹಾರಾಟ ನಡೆಸಲಿದ್ದಾರೆ. ಶಿವಾಂಗಿ ಅವರದ್ದು ಮುಂಚೂಣಿ ಹೋರಾಟದ ಪಾತ್ರ ಎಂದು ಹೇಳಿರುವ ಉಪ ಅಡ್ಮಿರಲ್ ಎ.ಕೆ. ಚಾವ್ಲಾ ಅವರಿಗೆ 'ಗೋಲ್ಡನ್ ವಿಂಗ್ಸ್' ನೀಡಿದ್ದಾರೆ. ಈ ಕೋರ್ಸ್‌ನ ಪಠ್ಯಕ್ರಮ ಮಹಿಳೆ ಹಾಗೂ ಪುರುಷರಿಗೆ ಸಂಪೂರ್ಣವಾಗಿ ಒಂದೇ ರೀತಿಯಲ್ಲಿದೆ.

 ''ಇಂದು ನನಗೆ ಹಾಗೂ ನನ್ನ ಹೆತ್ತವರಿಗೆ ಹೆಮ್ಮೆಯ ಕ್ಷಣ. ನೌಕಾ ಪಡೆಯಲ್ಲಿ ಮಹಿಳೆಯರು ಇದ್ದಾರೆ. ಆದರೆ, ಅವರು ಕಾಕ್‌ಪಿಟ್‌ನಲ್ಲಿ ಇಲ್ಲ. ವೀಕ್ಷಕರು ಇದ್ದಾರೆ. ಆದರೆ, ಇದು ಅದೆಲ್ಲದಕ್ಕಿಂತ ಭಿನ್ನ. ಮಹಿಳೆ ಮೊದಲ ಬಾರಿಗೆ ಕಾಕ್‌ಪಿಟ್‌ನಲ್ಲಿ ಇರಲಿದ್ದಾರೆ'' ಎಂದು ಶಿವಾಂಗಿ ಹೇಳಿದ್ದಾರೆ.

 ಮೂರನೇ ಹಂತದ ತರಬೇತಿ ಪೂರ್ಣಗೊಳಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಶಿವಾಂಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News