ಭೇಟಿ ವೇಳೆ ಪ್ರಧಾನಿ ಮೋದಿ ನೀಡಿದ್ದ 'ಆಫರ್' ಏನೆಂದು ಬಹಿರಂಗಪಡಿಸಿದ ಶರದ್ ಪವಾರ್

Update: 2019-12-02 17:22 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು 'ಜೊತೆಯಾಗಿ ಕೆಲಸ ಮಾಡುವ' ಪ್ರಸ್ತಾವವನ್ನು ತನ್ನ ಮುಂದಿಟ್ಟಿದ್ದರು. ಆದರೆ ತಾನು ಅದನ್ನು ನಿರಾಕರಿಸಿದೆ ಎಂದು ಎನ್ ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ.

"ಜೊತೆಯಾಗಿ ಕೆಲಸ ಮಾಡುವ ಆಫರನ್ನು ಮೋದಿ ನನ್ನ ಮುಂದಿಟ್ಟಿದ್ದರು. ನಮ್ಮಿಬ್ಬರ ನಡುವಿನ ವೈಯಕ್ತಿಕ ಸಂಬಂಧ ಉತ್ತಮವಾಗಿದೆ ಮತ್ತು ಅದು ಹಾಗೆಯೇ ಉಳಿಯಬೇಕು. ಆದರೆ ಒಟ್ಟಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಿದೆ" ಎಂದು ಮರಾಠಿ ಚಾನೆಲ್ ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರು ಬಹಿರಂಗಪಡಿಸಿದರು.

ಭಾರತದ ರಾಷ್ಟ್ರಪತಿಯನ್ನಾಗಿ ನೇಮಿಸುವುದಾಗಿ ಪ್ರಧಾನಿ ಆಫರ್ ಮಾಡಿದ್ದರು ಎನ್ನುವ ವರದಿಗಳನ್ನು ನಿರಾಕರಿಸಿದ ಪವಾರ್, "ಮೋದಿ ಸಂಪುಟದಲ್ಲಿ ಸುಪ್ರಿಯಾ ಸುಳೆಯವರನ್ನು ಸಚಿವೆಯನ್ನಾಗಿ ನೇಮಿಸುವ ಆಫರ್ ಮಾಡಲಾಗಿತ್ತು" ಎಂದವರು ಹೇಳಿದ್ದಾರೆ.

ಸುಪ್ರಿಯಾ ಸುಳೆಯವರು ಶರದ್ ಪವಾರ್ ರ ಪುತ್ರಿ ಮತ್ತು ಬಾರಾಮತಿ ಲೋಕಸಭಾ ಕ್ಷೇತ್ರದ ಸಂಸದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News