ತಂದೆಯಿಂದಲೇ ಅಪ್ರಾಪ್ತ ವಯಸ್ಸಿನ ಪುತ್ರಿಯ ಅತ್ಯಾಚಾರ

Update: 2019-12-02 17:49 GMT

 ಜೈಪುರ,ಡಿ.2: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಆಕೆಯ ತಂದೆ ಮನೆಯಲ್ಲಿ ಸಂಕೋಲೆಯಲ್ಲಿ ಬಂಧಿಸಿ, ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದ ಜಲೊರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತನ್ನ ತಂದೆಯು ಭಾರವಾದ ಸಂಕೋಲೆಗಳಿಂದ ತನ್ನ ಕಾಲು ಹಾಗೂ ಕೈಗಳನ್ನು ಕಟ್ಟಿ ಹಾಕಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಬಾಲಕಿಯು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ತನ್ನ ತಂದೆಗೆ ಕುಟುಂಬದ ಇನ್ನೋರ್ವ ಮಹಿಳೆಯ ಜೊತೆಗೆ ಅಕ್ರಮ ಸಂಬಂಧವಿದ್ದುದನ್ನು ತಾನು ಕಂಡ ಬಳಿಕ ಆತ ಈ ಹೀನ ಕೃತ್ಯವನ್ನು ಎಸಗಿದ್ದಾನೆಂದು ಆಕೆ ಹೇಳಿದ್ದಾಳೆ.

ಬಾಲಕಿಯು ಮನೆಯಿಂದ ಪರಾರಿಯಾದ ಬಳಿಕ ಆಕೆಯ ತಾಯಿಯ ಸೋದರನು ಪೊಲೀಸರಿಗೆ ದೂರು ನೀಡಿದ್ದರು. ತನ್ನ ತಂದೆಯು ಹಲವಾರು ದಿನಗಳಿಂದ ಸಂಕೋಲೆಯಲ್ಲಿಸ ಬಂಧಿಸಿ, ಅತ್ಯಾಚಾರವೆಸಗಿದ್ದಾನೆಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ಬಾಲಕಿಯ ತಾಯಿಯು, ತಿ ಕೊಡುತ್ತಿದ್ದ ಚಿತ್ರಹಿಂಸೆಯನ್ನು ತಾಳಲಾರದೆ ಏಳು ವರ್ಷಗಳ ಹಿಂದೆ ಆತನನ್ನು ತೊರೆದಿದ್ದಳು ಹಾಗೂ ಬೇರೊಂದು ವಿವಾಹವಾಗಿದ್ದಳು. ಆದಾಗ್ಯೂ, ಸಂತ್ರಸ್ತ ಬಾಲಕಿಯು ತಂದೆಯ ಜೊತೆಗೆ ವಾಸವಾಗಿದ್ದಳು.

ಶುಕ್ರವಾರದಂದು ಬಾಲಕಿಯು ಮನೆಯಿಂದ ಪರಾರಿಯಾಗಿದ್ದಳು ಹಾಗೂ ಕಾಲಿಗೆ ಕಟ್ಟಿದ ಸಂಕಲೆಗಳನ್ನು ಎಳೆದುಕೊಂಡೇ ಚಿಕ್ಕಪ್ಪನ ಹೊಲವನ್ನು ತಲುಪಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News