ಇಬ್ಬರು ಮಕ್ಕಳ ಹತ್ಯೆಗೈದು, ಇಬ್ಬರು ಮಹಿಳೆಯರೊಂದಿಗೆ ಕಟ್ಟಡದಿಂದ ಹಾರಿದ ಉದ್ಯಮಿ

Update: 2019-12-03 15:25 GMT
ಸಾಂದರ್ಭಿಕ ಚಿತ್ರ

 ಗಾಝಿಯಾಬಾದ್, ಡಿ. 3: ಇಲ್ಲಿನ ಇಂದಿರಾಪುರಂನ ವೈಭವ್ ಖಂಡ್‌ನ ರೆಸಿಡೆನ್ಸಿಯಲ್ ಬ್ಲಾಕ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ 7ನೇ ಮಹಡಿಯಿಂದ ಉದ್ಯಮಿಯೋರ್ವ ತನ್ನ ಪತ್ನಿ ಹಾಗೂ ಸಹೋದ್ಯೋಗಿಯೊಂದಿಗೆ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ, ಮಕ್ಕಳಿಬ್ಬರ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಗುಲ್ಶನ್ ಎಂದು ಗುರುತಿಸಲಾಗಿದೆ. ಇವರು ಜೀನ್ಸ್ ಉತ್ಪಾದನೆ ಉದ್ಯಮ ನಡೆಸುತ್ತಿದ್ದರು. ವ್ಯವಹಾರ ನಷ್ಟದಿಂದ ತನ್ನ ಇಬ್ಬರು ಮಕ್ಕಳನ್ನು ಹತ್ಯೆಗೈದು ಪತ್ನಿ ಹಾಗೂ ಸಹೋದ್ಯೋಗಿಯೊಂದಿಗೆ ಗುಲ್ಶನ್ ಆತ್ಮಹತ್ಯೆ ಮಾಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

 ತಮ್ಮ ಸಾವಿಗೆ ರಾಕೇಶ್ ಶರ್ಮಾ ಕಾರಣ. ನಮ್ಮೆಲ್ಲರನ್ನೂ ಒಟ್ಟಾಗಿ ಅಂತ್ಯ ಸಂಸ್ಕಾರ ಮಾಡಬೇಕು ಎಂದು ಅಪಾರ್ಟ್‌ಮೆಂಟ್‌ನ ಗೋಡೆಯಲ್ಲಿ ಬರೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News