ವಿಮಾನ ಪ್ರಯಾಣದಿಂದ ಮಾಲಿನ್ಯ: ದೋಣಿಯಲ್ಲಿ ಪಯಣಿಸಿದ ಗ್ರೆಟಾ ತನ್‌ಬರ್ಗ್‌

Update: 2019-12-03 16:12 GMT

ಮ್ಯಾಡ್ರಿಡ್ (ಸ್ಪೇನ್), ಡಿ. 3: ಹದಿಹರಯದ ಪರಿಸರ ಕಾರ್ಯಕರ್ತೆ ಸ್ವೀಡನ್‌ನ ಗ್ರೆಟಾ ತನ್‌ಬರ್ಗ್‌ರನ್ನು ಹೊತ್ತ ‘ಕ್ಯಾಟಮರಾನ್’ ದೋಣಿಯು ಮಂಗಳವಾರ ಬೆಳಗ್ಗೆ ಪೋರ್ಚುಗಲ್‌ನ ಲಿಸ್ಬನ್ ಬಂದರಿನತ್ತ ಬರುತ್ತಿರುವುದು ಕಂಡುಬಂದಿದೆ.

ಅಮೆರಿಕದ ನ್ಯೂಯಾರ್ಕ್‌ನಿಂದ ಹೊರಟ ಅವರು ಅಟ್ಲಾಂಟಿಕ್ ಸಾಗರವನ್ನು ದಾಟಿ ಯುರೋಪ್ ತಲುಪಲು 20 ದಿನಗಳನ್ನು ತೆಗೆದುಕೊಂಡಿದ್ದಾರೆ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿಮಾನ ಹಾರಾಟದಿಂದಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಉಂಟಾಗುವುದರಿಂದ ಅವರು ದೋಣಿ ಪ್ರಯಾಣವನ್ನು ಕೈಗೆತ್ತಿಕೊಂಡಿದ್ದಾರೆ. ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿರುವ ‘ಸಿಒಪಿ25’ ಪರಿಸರ ಶೃಂಗ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಅವರು ಯುರೋಪ್‌ಗೆ ಆಗಮಿಸಿದ್ದಾರೆ.

ಅವರು ಮಂಗಳವಾರ ಪೋರ್ಚುಗಲ್‌ನ ಪರಿಸರ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ ಹಾಗೂ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಬಳಿಕ ಮ್ಯಾಡ್ರಿಡ್‌ಗೆ ಪ್ರಯಾಣಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News