‘ಲವ್‌ಯಾತ್ರಿ’: ಸಲ್ಮಾನ್ ವಿರುದ್ಧದ ಕ್ರಿಮಿನಲ್ ಪ್ರಕರಣಗಳು ರದ್ದು

Update: 2019-12-03 16:17 GMT

ಹೊಸದಿಲ್ಲಿ, ಡಿ. 3: ‘ಲವ್‌ಯಾತ್ರಿ’ ಸಿನೆಮಾಕ್ಕೆ ಸಂಬಂಧಿಸಿ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ದಾಖಲಿಸಲಾದ ಎಲ್ಲ ಕ್ರಿಮಿನಲ್ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಸಿನೆಮಾದ ಶೀರ್ಷಿಕೆಗೆ ಸಂಬಂಧಿಸಿ ಸಲ್ಮಾನ್ ಖಾನ್ ವಿರುದ್ಧ ದಾಖಲಿಸಲಾದ ಕ್ರಿಮಿನಲ್ ಪ್ರಕರಣಗಳು/ಎಫ್‌ಐಆರ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಕಳೆದ ವಾರ ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

 ಸಿನೆಮಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದಾಗಿ ಆರೋಪಿಸಿ ಗುಜರಾತ್ ಹಾಗೂ ಬಿಹಾರ್‌ನಲ್ಲಿ ಪ್ರಕರಣ ದಾಖಲಿಸಿದ ಬಳಿಕ ಸಲ್ಮಾನ್ ಖಾನ್ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು.

 ಈ ಚಿತ್ರಕ್ಕೆ ಮೊದಲು ‘ಲವ್‌ರಾತ್ರಿ’ ಎಂದು ಹೆಸರು ಇರಿಸಲಾಗಿತ್ತು. ಆದರೆ, ಈ ಬಗ್ಗೆ ಸಂಘಪರಿವಾರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಶೀರ್ಷಿಕೆಯ ಪದಗಳು ನವರಾತ್ರಿಯಂತೇ ಇದೆ ಎಂದು ಅದು ಹೇಳಿತ್ತು. ಅನಂತರ ಸಿನೆಮಾದ ಹೆಸರನ್ನು ‘ಲವ್‌ಯಾತ್ರಿ’ ಎಂದು ಬದಲಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News