ಕೇಂದ್ರದ ನಿಧಿ ಕುರಿತು ಅನಂತ್ ಕುಮಾರ್ ಪ್ರತಿಪಾದನೆ: ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡುವಂತೆ ಶಿವಸೇನೆ ಆಗ್ರಹ

Update: 2019-12-03 17:51 GMT
Photo: PTI

ಹೊಸದಿಲ್ಲಿ, ಡಿ. 3: ಬುಲೆಟ್ ರೈಲು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರಕಾರ ಮಹಾರಾಷ್ಟ್ರಕ್ಕೆ ನೀಡಿದ್ದ 40,000 ಕೋಟಿ ರೂಪಾಯಿ ಹಿಂದಿರುಗಿಸಲಾಗಿದೆ ಎಂದು ಕರ್ನಾಟಕದ ಸಂಸದ ಅನಂತ್ ಕುಮಾರ್ ಹೆಗಡೆ ನೀಡಿದ ಹೇಳಿಕೆ ಕುರಿತ ಶಿವಸೇನೆ ಸದಸ್ಯರೊಬ್ಬರು ಮಂಗಳವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರೊಂದಿಗೆ ಪ್ರತಿಕ್ರಿಯೆ ಕೋರಿದ್ದಾರೆ.

ತರಾತುರಿಯಿಂದ ರಚನೆಯಾಗಿದ್ದ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರಕಾರ 40,000 ಕೋಟಿ ರೂಪಾಯಿ ನಿಧಿಯನ್ನು ಬಳಸದೆ ಹಿಂದಿರುಗಿಸಿತ್ತು ಎಂದು ಅನಂತ್ ಕುಮಾರ್ ಹೆಗ್ಡೆ ಹೇಳಿರುವುದಾಗಿ ಲೋಕಸಭೆಯ ಶೂನ್ಯ ವೇಳೆಯಲ್ಲಿ ಶಿವಸೇನೆಯ ವಿನಾಯಕ್ ರಾವತ್ ತಿಳಿಸಿದರು.

ಸದನದಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಿದ ರಾವತ್, ಈ ಮಾಹಿತಿಯನ್ನು ಬಿಜೆಪಿ ಸದಸ್ಯರಷ್ಟು ಯಾರೂ ಹಂಚಿಕೊಂಡಿಲ್ಲ. ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ಈ ಮಾಹಿತಿಯನ್ನು ಮಾಧ್ಯಮದ ಮುಂದೆ ಮೂರು ಬಾರಿ ಹಂಚಿಕೊಂಡಿದ್ದಾರೆ ಎಂದರು.

  ಇದು ಸಂಭವಿಸಿದೆಯೇ ಎಂದು ರಾವತ್ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಲ್ಲಿ ಪ್ರತಿಕ್ರಿಯೆ ಕೋರಿದ್ದಾರೆ. ಫಡ್ನವೀಸ್ ಈಗಾಗಲೇ ಅನಂತ್ ಕುಮಾರ್ ಹೆಗಡೆ ಪ್ರತಿಪಾದನೆ ಸಂಪೂರ್ಣ ತಪ್ಪು ಎಂದು ಹೇಳಿದ್ದಾರೆ ಹಾಗೂ ಅಂತದ್ದು ಯಾವುದೂ ನಡೆದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News