ಹೋರಾಟಗಾರರ ವಿರುದ್ಧದ ಪ್ರಕರಣ ಕೈಬಿಡುವಂತೆ ಉದ್ಧವ್ ಠಾಕ್ರೆಗೆ ಎನ್‌ಸಿಪಿ ಶಾಸಕ ಮನವಿ

Update: 2019-12-03 17:56 GMT

ಮುಂಬೈ, ಡಿ. 3: ನಾನಾರ್ ರಿಫೈನರಿ ಕಾರ್ಮಿಕರು ಹಾಗೂ ಆರೇ ಮೆಟ್ರೋ ಬೋಗಿಗಳ ನಿರ್ಮಾಣ ಕಾರ್ಮಿಕರ ವಿರುದ್ಧದ ಪ್ರಕರಣಗಳನ್ನು ಕೈಬಿಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದ ದಿನಗಳ ಬಳಿಕ, ಪುಣೆಯ ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಕೈಬಿಡುವಂತೆ ಎನ್‌ಸಿಪಿ ನಾಯಕ ಹಾಗೂ ಶಾಸಕ ಧನಂಜಯ ಮುಂಢೆ ಮನವಿ ಮಾಡಿದ್ದಾರೆ.

 ಮಹಾರಾಷ್ಟ್ರ ಸರಕಾರ ರಚಿಸಿದ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿಯಲ್ಲಿ ಮಿತ್ರ ಪಕ್ಷವಾಗಿರುವ ಎನ್‌ಸಿಪಿಯ ಮುಂಡೆ, ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಕೈಬಿಡುವಂತೆ ಆಗ್ರಹಿಸಿ ಉದ್ಧವ್ ಠಾಕ್ರೆ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.

ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರರು ಸೇರಿದಂತೆ ಹಲವರ ವಿರುದ್ಧ ಈ ಹಿಂದಿನ ಫಡ್ನವೀಸ್ ಸರಕಾರ ಸುಳ್ಳು ಪ್ರಕರಣ ದಾಖಲಿಸಿದೆ ಎಂದು ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ಮುಂಢೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News