ವಾಲಿಬಾಲ್‌ನಲ್ಲಿ ಭಾರತಕ್ಕೆ ಅವಳಿ ಚಿನ್ನ

Update: 2019-12-03 18:08 GMT

ಕಠ್ಮಂಡು, ಡಿ.3: ದಕ್ಷಿಣ ಏಶ್ಯನ್ ಕ್ರೀಡಾಕೂಟದ (ಎಸ್‌ಎಜಿ) ವಾಲಿಬಾಲ್‌ನ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಭಾರತ ಚಿನ್ನ ಗೆದ್ದುಕೊಂಡಿದೆ.

ಪುರುಷರ ವಾಲಿಬಾಲ್‌ನ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು, ಮಹಿಳೆಯರ ವಾಲಿಬಾಲ್ ಫೈನಲ್‌ನಲ್ಲಿ ಆತಿಥೇಯ ನೇಪಾಳವನ್ನು ಸೋಲಿಸಿದ ಭಾರತ ಚಿನ್ನ ಬಾಚಿಕೊಂಡಿದೆ. ಮಂಗಳವಾರ ನಡೆದ ರೋಚಕ ಫೈನಲ್‌ನಲ್ಲಿ ಭಾರತದ ತಂಡವು ಪಾಕಿಸ್ತಾನವನ್ನು 20-25, 25-15, 25-17 ಮತ್ತು 29-27ರಲ್ಲಿ ಅಂತರದಿಂದ ಸೋಲಿಸಿದೆ.

ಮೊದಲ ಗೇಮ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 20-25 ಹಿನ್ನಡೆ ಅನುಭವಿಸಿತ್ತು. ಬಳಿಕ ತಿರುಗೇಟು ನೀಡಿದ ಭಾರತದ ತಂಡ 25-15 ಮತ್ತು 25-17 ಅಂತರದಿಂದ ಮುನ್ನಡೆ ಸಾಧಿಸಿತು. ಮುಂದಿನ ಆಟದಲ್ಲೂ ಭಾರತ ಹಿಡಿತ ಸಡಿಲಗೊಳಿಸದೆ ಆಟವಾಡಿ 29-27 ಅಂತರದಲ್ಲಿ ಗೆಲುವಿನ ನಗೆ ಬೀರಿತು. ಮಹಿಳೆಯರ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆತಿಥೇಯ ನೇಪಾಳವನ್ನು ಭಾರತ 25-17, 23-25, 21-25, 25-20 ಮತ್ತು 15-6ರಿಂದ ಮಣಿಸಿತು. ಕಂಚಿನ ಪದಕವನ್ನು ಶ್ರೀಲಂಕಾ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಭಾರತದ ಪುರುಷ ವಾಲಿಬಾಲ್ ತಂಡದ ಮುಖ್ಯ ಕೋಚ್ ಜಿ.ಇ. ಶ್ರೀಧರನ್ ಮಾತನಾಡಿ ಮುಂದಿನ ಒಲಿಂಪಿಕ್ಸ್‌ಗೆ ಭಾರತ ಅರ್ಹತೆ ಗಿಟಿಸ್ಟಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News