1,500 ಮೀ. ಓಟದಲ್ಲಿ ಭಾರತಕ್ಕೆ ನಾಲ್ಕು ಪದಕ

Update: 2019-12-03 18:10 GMT

ಕಠ್ಮಂಡು, ಡಿ.3: ಭಾರತದ ಕ್ರೀಡಾ ಪಟುಗಳು 13ನೇ ದಕ್ಷಿಣ ಏಶ್ಯನ್ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಮಂಗಳವಾರ ನಡೆದ ಪುರುಷರ 1,500 ಮೀ ಓಟದಲ್ಲಿ 1 ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ಭಾರತದ ಅಥ್ಲೀಟ್‌ಗಳು ಜಯಿಸಿದ್ದಾರೆ. ಇಲ್ಲಿನ ದಶರಥ್ ಕ್ರೀಡಾಂಗಣದಲ್ಲಿ ನಡೆದ ಪುರುಷರ 1,500 ಮೀಟರ್ ಓಟದಲ್ಲಿ ಭಾರತದ ಆಟಗಾರರು ಚಿನ್ನ ಮತ್ತು ಬೆಳ್ಳಿ ಗೆದ್ದರು ಮತ್ತು ಮಹಿಳೆಯರ 1,500 ಮೀಟರ್ ಓಟದಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದಾರೆ.

ಪುರುಷರ 1,500 ಮೀಟರ್ ಓಟದಲ್ಲಿ ಅಜಯ್ ಕುಮಾರ್ ಸರೋ (3.54.18 ಸೆ.) ಚಿನ್ನ ಗೆದ್ದರು. ಅಜಿತ್ ಕುಮಾರ್( 3.57.18 ಸೆ.) ಬೆಳ್ಳಿ ಗೆದ್ದರು. ಕಂಚು ನೇಪಾಳದ ಟ್ಯಾಂಕಾ ಕಾರ್ಕಿ(3.50.20 ಸೆ.) ಪಾಲಾಗಿದೆ . ಸೋಮವಾರ ಭಾರತದ ಚಂದಾ (4.34.51 ಸೆ) ಮಹಿಳೆಯರ 1500 ಮೀ ಓಟದಲ್ಲಿ ಬೆಳ್ಳಿ ಪದಕ ಗೆದ್ದರೆ, ಸ್ವದೇಶಿ ಚಿತ್ರ ಪಾಲಕೀಜ್ (4.35.46 ಸೆ) ಕಂಚು ಗೆದ್ದರು. ಈ ಪಂದ್ಯಾವಳಿಯಲ್ಲಿ ಚಿನ್ನವನ್ನು ಶ್ರೀಲಂಕಾದ ಉದಾ ಕುಬುರಲೇಜ್ (4.34.34 ಸೆ) ಪಡೆದರು.

ಭಾರತೀಯರು ಇದುವರೆಗೆ ಆರು ಚಿನ್ನ, 11 ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ 21 ಪದಕಗಳನ್ನು ಸಂಗ್ರಹಿಸಿದ್ದಾರೆ. ಆತಿಥೇಯ ನೇಪಾಳ (28 ಪದಕ) ದೇಶವು ಇದೀಗ ಎರಡನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News