ಸತತ 2ನೇ ವರ್ಷವೂ ಐಪಿಎಲ್‌ಗೆ ಸ್ಟಾರ್ಕ್ ಅಲಭ್ಯ

Update: 2019-12-03 18:13 GMT

ಹೊಸದಿಲ್ಲಿ, ಡಿ.3: ಆಸ್ಟ್ರೇಲಿಯ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಸತತ ಎರಡನೇ ವರ್ಷ ಐಪಿಎಲ್ ಟ್ವೆಂಟಿ-20 ಟೂರ್ನಿಯಿಂದ ಹೊರಗುಳಿದಿದ್ದಾರೆ. ಸ್ಟಾರ್ಕ್ ಸಹ ಆಟಗಾರರಾದ ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಕ್ರಿಸ್ ಲಿನ್ ಸಹಿತ ಏಳು ಆಟಗಾರರು ಡಿ.19ರಂದು ಮುಂದಿನ ಆವೃತ್ತಿಯ ಐಪಿಎಲ್‌ಗಾಗಿ ಕೊಲ್ಕತ್ತಾದಲ್ಲಿ ನಡೆಯುವ ಆಟಗಾರರ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

29ರ ಹರೆಯದ ಸ್ಟಾರ್ಕ್ 2015ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. 2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಎಡಗೈ ವೇಗದ ಬೌಲರ್ ಕೋಲ್ಕತಾ ನೈಟ್ ರೈಡರ್ಸ್‌ಗೆ 9.4 ಕೋ.ರೂ.ಗೆ ಮಾರಾಟವಾಗಿದ್ದರು. ಆದರೆ, ಗಾಯದ ಸಮಸ್ಯೆಯಿಂದಾಗಿ ಟೂರ್ನಿ ಇಡೀ ಅಲಭ್ಯರಾಗಿದ್ದರು. ಕಳೆದ ವರ್ಷ 2019ರ ಐಪಿಎಲ್‌ಗಿಂತ ಮೊದಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದರು. ಆದರೆ ಆಸ್ಟ್ರೇಲಿಯ ತಂಡದ ವಿಶ್ವಕಪ್ ಅಭಿಯಾನಕ್ಕೆ ಆದ್ಯತೆ ನೀಡಿ ಐಪಿಎಲ್‌ನಿಂದ ದೂರ ಉಳಿದಿದ್ದರು. ಹರಾಜಿನ ಕಣದಲ್ಲಿರುವ 971 ಆಟಗಾರರಲ್ಲಿ ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್ ಸ್ಥಾನ ಪಡೆದಿಲ್ಲ. ಮ್ಯಾಕ್ಸ್‌ವೆಲ್ ಹಾಗೂ ಕ್ರಿಸ್ ಲಿನ್ ಹರಾಜಿನ ಪಟ್ಟಿಯಲ್ಲಿದ್ದು, ತಲಾ 2 ಕೋ.ರೂ.ಮೂಲಬೆಲೆ ಹೊಂದಿದ್ದಾರೆ.

ಆಸ್ಟ್ರೇಲಿಯದ ವೇಗದ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹೇಝಲ್‌ವುಡ್, ಆಸ್ಟ್ರೇಲಿಯದ ಆಲ್‌ರೌಂಡರ್‌ಮಿಚೆಲ್ ಮಾರ್ಷ್, ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇಯ್ನಿ, ಶ್ರೀಲಂಕಾದ ಬ್ಯಾಟ್ಸ್‌ಮನ್ ಆ್ಯಂಜೆಲೊ ಮ್ಯಾಥ್ಯೂಸ್ ತಲಾ 2 ಲಕ್ಷ ರೂ. ಮೂಲಬೆಲೆ ಹೊಂದಿರುವ ಇತರ ಆಟಗಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News