ಮಿಲಾಗ್ರಿಸ್ ಪಿಯು ಕಾಲೇಜಿನ ವಾರ್ಷಿಕ ಕ್ರೀಡಾಕೂಟ

Update: 2019-12-04 04:24 GMT

ಮಂಗಳೂರು, ಡಿ.4: ಮಂಗಳೂರಿನ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿತು.

ಕ್ರೀಡಾಕೂಟವನ್ನು  ಎಂಆರ್ ಪಿಎಲ್ ಪವರ್ ಪ್ಲಾಂಟ್ನ ತಾಂತ್ರಿಕ ಸಹಾಯಕಾಧಿಕಾರಿ ರಿತೇಶ್ ಮ್ಯಾನ್ಯುವೆಲ್ ಡಿಸೋಜ ಉದ್ಘಾಟಿಸಿದರು. ಕಾಲೇಜಿನ ಸಂಚಾಲಕ ರೆ. ಫಾ.ಜೊಸೆಫ್ ಲೋಬೋ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಲೇಜಿನ ರಕ್ಷಕ/ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹೀಂ ಕೊಣಾಜೆ ಹಾಗೂ ಕಾಲೇಜಿನ ಆಡಳಿತಾಧಿಕಾರಿ ರೆ.ಫಾ.ಮೈಕಲ್ ಸಾಂತುಮೇಯರ್ ಮಾತನಾಡಿ ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲ ಜೋನ್ ಪಾಯಸ್ ಸ್ವಾಗತಿಸಿದರು. ಉಪ ಪ್ರಾಂಶುಪಾಲ ರೆ.ಫಾ.ಮ್ಯಾಕ್ಸಿಮ್ ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News