ಡಿ.5: ಮಂಗಳೂರಿನ ಶಾಲೆಗಳಲ್ಲಿ ಜಾಗತಿಕ ತಾಪಮಾನ ಜಾಗೃತಿ ಕಾರ್ಯಕ್ರಮ

Update: 2019-12-04 06:22 GMT

ಮಂಗಳೂರು, ಡಿ.4: ದ.ಕ. ಜಿಲ್ಲಾಡಳಿತ ಹಾಗೂ ಲಯನ್ಸ್ ಕ್ಲಬ್ ವೆಲೆನ್ಸಿಯಾ ವತಿಯಿಂದ ಡಿ.5 ರಂದು ಬೆಳಗ್ಗೆ 9 ಗಂಟೆಯಿಂದ 10 ಗಂಟೆಯ ವರೆಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳ ಸಹಕಾರದೊಂದಿಗೆ ಜಾಗತಿಕ ತಾಪಮಾನ ಜಾಗೃತಿ ಕಾರ್ಯಕ್ರಮ ನಡೆಯಲಿದೆ.

 ಅಂದು ಬೆಳಗ್ಗೆ 9 ಗಂಟೆಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯ್ದ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಮ್ಮುಖದಲ್ಲಿ ದ.ಕ ಜಿಲ್ಲಾಧಿಕಾರಿ  ಸಿಂಧೂ ಬಿ. ರೂಪೇಶ್ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News