×
Ad

ಟ್ರಂಪ್ ರನ್ನು ಅಣಕವಾಡಿದ ಜಾಗತಿಕ ನಾಯಕರು: ವಿಡಿಯೋ ಬಹಿರಂಗ

Update: 2019-12-04 17:42 IST

ವಾಟ್‍ಫೋರ್ಡ್: ಇಂದು ನಡೆಯಲಿರುವ ನ್ಯಾಟೋ ಶೃಂಗಸಭೆಗೆ ಮುಂಚಿತವಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಧ್ಯಮಗಳಲ್ಲಿ ಬಹಳಷ್ಟು ಕಾಣುತ್ತಿರುವುದನ್ನು ಬ್ರಿಟನ್, ಕೆನಡಾ, ಫ್ರಾನ್ಸ್  ಹಾಗೂ ನೆದರ್ ಲ್ಯಾಂಡ್ಸ್ ನಾಯಕರು ವ್ಯಂಗ್ಯವಾಡುತ್ತಿರುವುದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ.

ಆತಿಥ್ಯ ನೀಡಿದ ಬ್ರಿಟಿಷರ ಕ್ಯಾಮರಾದಲ್ಲಿ ಈ ದೃಶ್ಯ  ಸೆರೆಯಾಗಿದೆ. ``ನೀವು ಈ ಕಾರಣದಿಂದ ತಡವಾಗಿರುವಿರಾ?'' ಎಂದು ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್ ಅವರನ್ನು  ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಪ್ರಶ್ನಿಸಿದರೆ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯೋ "ಅವರು 40 ನಿಮಿಷ ಪತ್ರಿಕಾಗೋಷ್ಠಿ ನಡೆಸುವುದರಿಂದ ತಡವಾಗಿದ್ದಾರೆ'' ಎಂದು  ಮಧ್ಯ ಪ್ರವೇಶಿಸಿ ಹೇಳುತ್ತಿರುವುದು ಕೇಳಿಸುತ್ತದೆ.

ಮಂಗಳವಾರ ಮ್ಯಾಕ್ರೋನ್ ಹಾಗೂ ಟ್ರಂಪ್ ನಡುವೆ ನಡೆದ ಮಾತುಕತೆಗಳ ನಂತರ ಮಾಧ್ಯಮದ ಜತೆ ದೀರ್ಘ ಪ್ರಶ್ನೋತ್ತರ ನಡೆದಿತ್ತು. ಇಬ್ಬರು ನಾಯಕರೂ ನ್ಯಾಟೋ ತಂತ್ರಗಾರಿಕೆ ಹಾಗೂ ವ್ಯಾಪಾರ ವಿಚಾರದಲ್ಲಿ ಸಾರ್ವಜನಿಕವಾಗಿ ಅಸಮ್ಮತಿ ವ್ಯಕ್ತಪಡಿಸಿದ್ದರು.

ಕಳೆದ ವರ್ಷ ಮಾಡಿದಂತೆ ಈ ವರ್ಷವೂ ಟ್ರಂಪ್ ಶೃಂಗಸಭೆಯ ಶಿಷ್ಟಾಚಾರ ಮೀರಿ ಮಿತ್ರ ರಾಷ್ಟ್ರಗಳ ನಾಯಕರ ಜತೆಗೆ ಕಾಣಿಸಿಕೊಂಡಾಗಲೆಲ್ಲಾ ಮಾಧ್ಯಮಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದರಲ್ಲದೆ ಮ್ಯಾಕ್ರೋನ್ ಟೀಕೆಗಳನ್ನು `ಅಸಹ್ಯ' ಎಂದು  ಖಂಡಿಸಿದ್ದರು. ಅಷ್ಟೇ ಅಲ್ಲದೆ ತಮ್ಮ ಮಿಲಿಟರಿ ವೆಚ್ಚದ ಗುರಿ ತಲುಪಲು ಸಾಧ್ಯವಾಗದ ಯುರೋಪಿಯನ್ ದೇಶಗಳನ್ನು `ತಪ್ಪಿತಸ್ಥರು' ಎಂದು ಬಣ್ಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News