ಫ್ರಾನ್ಸ್ ವಿರುದ್ಧ ಅಮೆರಿಕದ ಆಮದು ತೆರಿಗೆ ಬೆದರಿಕೆಗೆ ಒಂದಾಗಿ ಉತ್ತರ: ಐರೋಪ್ಯ ಒಕ್ಕೂಟ

Update: 2019-12-04 16:04 GMT

ಬ್ರಸೆಲ್ಸ್ (ಬೆಲ್ಜಿಯಮ್), ಡಿ. 4: ಫ್ರಾನ್ಸ್ ವಿರುದ್ಧ ಅಮೆರಿಕ ವಿಧಿಸಿರುವ ಆಮದು ತೆರಿಗೆ ಬೆದರಿಕೆಗಳಿಗೆ ‘ಒಂದಾಗಿ’ ಉತ್ತರಿಸಲಾಗುವುದು ಎಂದು ಐರೋಪ್ಯ ಒಕ್ಕೂಟ ಹೇಳಿದೆ ಹಾಗೂ ಈ ವಿಷಯದಲ್ಲಿ ಮಾತುಕತೆ ನಡೆಸುವಂತೆ ಅಮೆರಿಕವನ್ನು ಒತ್ತಾಯಿಸಿದೆ.

‘‘ಇತರ ಎಲ್ಲಾ ವ್ಯಾಪಾರ ಸಂಬಂಧಿ ವಿಷಯಗಳಲ್ಲಿ ವ್ಯವಹರಿಸಿದಂತೆ, ಈ ವಿಷಯದಲ್ಲೂ ಐರೋಪ್ಯ ಒಕ್ಕೂಟವು ವ್ಯವಹರಿಸುವುದು ಹಾಗೂ ಒಂದಾಗಿ ಪ್ರತಿಕ್ರಿಯೆ ನೀಡುವುದು ಹಾಗೂ ಒಗ್ಗಟ್ಟಿನಿಂದ ಇರುವುದು’’ ಎಂದು ಐರೋಪ್ಯ ಒಕ್ಕೂಟ ಕಮಿಶನ್‌ನ ವಕ್ತಾರ ಡೇನಿಯಲ್ ರೊಸಾರಿಯೊ ಮಂಗಳವಾರ ಹೇಳಿದರು.

ಫ್ರಾನ್ಸ್‌ನ ಸರಕುಗಳ ಮೇಲೆ 100 ಶೇಕಡದವರೆಗೆ ಆಮದು ತೆರಿಗೆಯನ್ನು ವಿಧಿಸಲಾಗುವುದು ಎಂಬುದಾಗಿ ಅಮೆರಿಕ ಸೋಮವಾರ ಹೇಳಿತ್ತು. ಗೂಗಲ್ ಮತ್ತು ಫೇಸ್‌ಬುಕ್ ಮುಂತಾದ ಅಮೆರಿಕದ ದೈತ್ಯ ತಂತ್ರಜ್ಞಾನ ಕಂಪೆನಿಗಳ ಮೇಲೆ ಫ್ರಾನ್ಸ್ ಡಿಜಿಟಲ್ ಸರ್ವಿಸಸ್ ತೆರಿಗೆ ವಿಧಿಸಲು ಮುಂದಾದ ಬಳಿಕ ಅಮೆರಿಕ ಈ ಕ್ರಮ ತೆಗೆದುಕೊಂಡಿದೆ.

ಐರೋಪ್ಯ ಒಕ್ಕೂಟದ 28 ಸದಸ್ಯ ದೇಶಗಳ ಪರವಾಗಿ ವ್ಯಾಪಾರ ವಿಷಯಗಳನ್ನು ನಿಭಾಯಿಸುತ್ತಿರುವ ಐರೋಪ್ಯ ಒಕ್ಕೂಟ ಕಮಿಶನ್, ಮುಂದಿನ ಕ್ರಮಗಳ ಬಗ್ಗೆ ಫ್ರಾನ್ಸ್ ಅಧಿಕಾರಿಗಳೊಂದಿಗೆ ನಿಕಟವಾಗಿ ಚರ್ಚಿಸುತ್ತಿದೆ ಎಂದು ರೊಸಾರಿಯೊ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News