ಕರ್ತಾರ್‌ಪುರದಲ್ಲಿ ಪಾಕ್ ವ್ಯಕ್ತಿಯೊಂದಿಗೆ ಪಲಾಯನಗೈಯಲು ಯತ್ನಿಸಿದ ಸಿಖ್ ಯುವತಿ
Update: 2019-12-04 21:36 IST
ಲಾಹೋರ್, ಡಿ. 4: ಸಿನಿಮೀಯ ಘಟನೆಯೊಂದರಲ್ಲಿ, ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಹೋಗಿದ್ದ ಭಾರತೀಯ ಸಿಖ್ ಮಹಿಳೆಯೊಬ್ಬರು, ಫೇಸ್‌ಬುಕ್‌ನಲ್ಲಿ ಪರಿಚಿತನಾಗಿದ್ದ ಪಾಕಿಸ್ತಾನಿ ವ್ಯಕ್ತಿಯೊಬ್ಬರೊಂದಿಗೆ ಪಲಾಯನ ಮಾಡಲು ಯತ್ನಿಸಿದ್ದಾರೆ.
ಆದರೆ, ಪಾಕಿಸ್ತಾನದ ಅಧಿಕಾರಿಗಳು ಈ ಪ್ರಯತ್ನವನ್ನು ವಿಫಲಗೊಳಿಸಿದ ಯುವತಿಯನ್ನು ವಾಪಸ್ ಭಾರತಕ್ಕೆ ಕಳುಹಿಸಿದ್ದಾರೆ.
ಮಂಜಿತ್ ಕೌರ್ ನವೆಂಬರ್ ಕೊನೆಯ ವಾರದಲ್ಲಿ ಕರ್ತಾರ್‌ಪುರಕ್ಕೆ ಹೋಗಿದ್ದರು. ಅಲ್ಲಿನ ಗುರುದ್ವಾರದಲ್ಲಿ ಅವರನ್ನು ಭೇಟಿಯಾಗಲು ಪಾಕಿಸ್ತಾನದ ಫೈಸಲಾಬಾದ್ ನಿವಾಸಿಯೊಬ್ಬ ಬಂದಿದ್ದರು.
ಇತರ ಮಹಿಳೆಯೊಬ್ಬರ ಗುರುತು ಚೀಟಿ ತೋರಿಸಿ ಮಂಜಿತ್ ಕೌರ್ ತನ್ನ ಪ್ರಿಯಕರನೊಂದಿಗೆ ಫೈಸಲಾಬಾದ್‌ಗೆ ಹೋಗುವ ಪ್ರಯತ್ನದಲ್ಲಿದ್ದಾಗ ಪೊಲೀಸರು ತಡೆದರು ಎಂದು ಮೂಲವೊಂದು ತಿಳಿಸಿದೆ.