ವಿಂಡೀಸ್ ಬ್ಯಾಟಿಂಗ್ ಕೋಚ್ ಆಗಿ ಮೊಂಟಿ ದೇಸಾಯಿ

Update: 2019-12-04 18:05 GMT

ಹೈದರಾಬಾದ್, ಡಿ.4: ಭಾರತ ವಿರುದ್ಧ ಶುಕ್ರವಾರ ಆರಂಭವಾಗಲಿರುವ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ಮೊದಲು ವೆಸ್ಟ್ ಇಂಡೀಸ್ ತಂಡ ಬ್ಯಾಟಿಂಗ್ ಕೋಚ್ ಆಗಿ ಮೊಂಟಿ ದೇಸಾಯಿ ಅವರನ್ನು ಬುಧವಾರ ಆಯ್ಕೆ ಮಾಡಿದೆ.

ದೇಸಾಯಿಗೆ 2ವರ್ಷಗಳ ಕಾಲ ಗುತ್ತಿಗೆ ನೀಡಲಾಗಿದ್ದು, ಶುಕ್ರವಾರ ಹೈದರಾಬಾದ್‌ನಲ್ಲಿ ಮೊದಲ ಟ್ವೆಂಟಿ-20 ಪಂದ್ಯ ಆರಂಭವಾಗುವ ಮೊದಲು ವಿಂಡೀಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ತನ್ನ 12 ವರ್ಷಗಳ ವೃತ್ತಿಬದುಕಿನಲ್ಲಿ ದೇಸಾಯಿ ಅವರು ಅಫ್ಘಾನಿಸ್ತಾನ, ನೇಪಾಳ, ಕೆನಡಾ, ಭಾರತದ ಸ್ಥಳೀಯ ತಂಡಗಳು ಹಾಗೂ ಐಪಿಎಲ್ ಫ್ರಾಂಚೈಸಿಗಳಾದ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಲಯನ್ಸ್‌ಗೆ ಕೋಚಿಂಗ್ ನೀಡಿದ್ದರು.

ನಾನು ಈ ಹಿಂದೆ ಮೊಂಟಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ಆಟಗಾರರ ಪ್ರತಿಭೆ ಉತ್ತಮಪಡಿಸುವ ತನ್ನ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದ್ದಾರೆ ಎಂದು ವೆಸ್ ್ಟಇಂಡೀಸ್‌ನ ಮುಖ್ಯ ಕೋಚ್ ಫಿಲ್ ಸಿಮೊನ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News