ಲಂಕಾದ ಮುಖ್ಯ ಕೋಚ್ ಆಗಿ ಮಿಕಿ ಅರ್ಥರ್ ?

Update: 2019-12-04 18:08 GMT

ಕೊಲಂಬೊ, ಡಿ.4: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕೋಚ್ ಮಿಕಿ ಅರ್ಥರ್ ಶ್ರೀಲಂಕಾ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ಕಂಡು ಬಂದಿದೆ.

ಲಭ್ಯ ಮೂಲಗಳ ಪ್ರಕಾರ ಅರ್ಥರ್ ಅವರು ಎರಡು ವರ್ಷಗಳ ಕಾಲ ಶ್ರೀಲಂಕಾದ ಕೋಚ್ ಆಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದಾರೆ. ಶೀಘ್ರದಲ್ಲೇ ಅವರ ನೇಮಕದ ಆದೇಶ ಹೊರಬೀಳಲಿದೆ.

ಝಿಂಬಾಬ್ವೆ ತಂಡದ ಮಾಜಿ ಬ್ಯಾಟ್ಸ್ ಮನ್ ಗ್ರಾಂಟ್ ಫ್ಲವರ್ ಬ್ಯಾಟಿಂಗ್ ಕೋಚ್ ,ಡೇವಿಡ್ ಸಾಕೆರ್ ಮತ್ತು ಶಾನ್ ಮೆಕ್‌ಡರ್ಮೊಟ್ ಕ್ರಮವಾಗಿ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ನೇಮಕಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News