ಡಿ.6ರಂದು ಮಲ್ಲೂರು ಅಸಾಸ್ ನಲ್ಲಿ ಅಹ್ಲ್ ಬದ್ರ್ ಮಜ್ಲಿಸ್

Update: 2019-12-05 07:38 GMT

ಮಂಗಳೂರು, ಡಿ.5: ಅಸಾಸ್ ಸಂಸ್ಥೆಯಲ್ಲಿ ಪ್ರತಿ ತಿಂಗಳು ನಡೆಸಲ್ಪಡುವ ಮಜ್ಲಿಸ್ ಅಹ್ಲ್ ಬದ್ರ್ ನ.6 ರಂದು ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ಬಹಳ ನಡೆಯಲಿದೆ.

ಅಸಾಸ್ ಸಂಸ್ಥೆಯ ಪ್ರಧಾನ ಮುದರ್ರಿಸ್ ಸೈಯ್ಯಿದ್ ನಿಝಾಮುದ್ದೀನ್ ಬಾಫಕಿ ಪ್ರಾರ್ಥನೆ ಹಾಗೂ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಅಸಾಸ್ ಸಂಸ್ಥೆಯ ಅಧ್ಯಕ್ಷ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.

ದುಬೈ ಅವ್ಕಾಫ್ ಇಮಾಮ್ ಶೈಖ್ ಫವಾಝ್ ಖಾಲಿದ್ ಅಝ್ಹರಿ ಅರಬೀ ನಶೀದ ಆಲಾಪನೆ ನಡೆಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಬೂರಾಶಿದ್ ಐಎಂಕೆ ಮದನಿ ಮೊರೊಕ್ಕೊ, ಎಂ.ಎ ಹೈದರ್ ಪರ್ತಿಪಾಡಿ, ಅಬ್ದುಲ್ ಅಝೀಝ್ ಮದನಿ ದಮಾಮ್, ಆರ್.ಕೆ ಮದನಿ ಅಮ್ಮೆಂಬಳ, ಅಸಾಸ್ ಸಂಸ್ಥೆಯ ಮುದರ್ರಿಸ್ ಹುಸೈನ್ ಸಖಾಫಿ ಕಕ್ಕಿಂಜೆ, ಸಂಸ್ಥೆಯ ಪ್ರಾಧ್ಯಾಪಕ ಕಾಸಿಂ ಮದನಿ ಬೊಳ್ಳಾಯಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಫಿ ಮದನಿ ಕರಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News