ಜೆಎನ್‌ಯು ಹಾಸ್ಟೆಲ್‌ಗಳ ನಿರ್ವಹಣೆ ವೆಚ್ಚ ಹೆಚ್ಚಳ ಶುಲ್ಕ ಏರಿಕೆಗೆ ಕಾರಣ: ಪೋಖ್ರಿಯಾಲ್

Update: 2019-12-05 14:10 GMT

ಹೊಸದಿಲ್ಲಿ,ಡಿ.5: ಹೆಚ್ಚುತ್ತಿರುವ ಹಾಸ್ಟೆಲ್‌ಗಳ ನಿರ್ವಹಣೆ ವೆಚ್ಚಗಳನ್ನು ಸರಿದೂಗಿಸಲು ಮತ್ತು ಅವುಗಳನ್ನು ‘ಲಾಭವೂ ಇಲ್ಲ ನಷ್ಟವೂ ಇಲ್ಲ’ ನೀತಿಯಡಿ ನಡೆಸಲು ಜೆಎನ್‌ಯುದಲ್ಲಿ ಶುಲ್ಕ ಹೆಚ್ಚಳ ಮಾಡಲಾಗಿತ್ತು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ ಪೋಖ್ರಿಯಾಲ್ ನಿಶಾಂಕ ಅವರು ಗುರುವಾರ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.

ವಿವಿಯು ಸುಮಾರು 40 ವರ್ಷಗಳ ಬಳಿಕ ಹಾಸ್ಟೆಲ್ ಶುಲ್ಕಗಳನ್ನು ಹೆಚ್ಚಿಸಿದೆ ಎಂದೂ ಅವರು ಹೇಳಿದರು.

ಜೆಎನ್‌ಯು ವಿದ್ಯಾರ್ಥಿಗಳು ಹಾಸ್ಟೆಲ್ ಶುಲ್ಕ ಏರಿಕೆಯನ್ನು ವಿರೋಧಿಸಿ ಕಳೆದೊಂದು ತಿಂಗಳಿಗೂ ಹೆಚ್ಚು ಸಮಯದಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News