ಬಿಡಬ್ಲ್ಯು ಎಫ್ ಪ್ರಶಸ್ತಿಗೆ ಸಾತ್ವಿಕ್, ಚಿರಾಗ್ ಶೆಟ್ಟಿ ಹೆಸರು ನಾಮನಿರ್ದೇಶನ

Update: 2019-12-05 18:21 GMT

ಹೊಸದಿಲ್ಲಿ, ಡಿ.5: ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಬ್ಯಾಡ್ಮಿಂಟನ್ ವಲ್ಡ್‌ರ್  ಫೆಡರೇಶನ್(ಬಿಡಬ್ಲುಎಫ್) ವರ್ಷದ ಅತ್ಯಂತ ಸುಧಾರಿತ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನ ಗೊಂಡಿದ್ದಾರೆ. ಈ ಇಬ್ಬರು ಈ ವರ್ಷ ಸ್ಮರಣೀಯ ಗೆಲುವು ಸಾಧಿಸಿದ್ದಾರೆ. ಯುವ ಡಬಲ್ಸ್ ಜೋಡಿ ಥಾಯ್ಲೆಂಡ್ ಓಪನ್‌ನಲ್ಲಿ ಸೂಪರ್-500 ಪ್ರಶಸ್ತಿಯನ್ನು ಜಯಿಸಿತ್ತು. ಫ್ರೆಂಚ್ ಓಪನ್ ಸೂಪರ್-750 ಸ್ಪರ್ಧೆಯಲ್ಲಿ ಈ ವರ್ಷದ ಫೈನಲ್‌ಗೆ ತಲುಪಿತ್ತು. ಕೆನಡಾದ ಮಹಿಳಾ ಸಿಂಗಲ್ಸ್ ಆಟಗಾರ್ತಿ ಮಿಚೆಲ್ ಲೀ, ಕೊರಿಯಾದ ಮಹಿಳಾ ಡಬಲ್ಸ್ ಜೋಡಿ ಕಿಮ್ ಸೊ ಯಿಯೊಂಗ್ ಹಾಗೂ ಕೊಂಗ್ ಹೀ ಯಾಂಗ್ ಹಾಗೂ ಇಂಡೊನೇಶ್ಯದ ಮಿಕ್ಸೆಡ್ ಡಬಲ್ಸ್ ಜೋಡಿ ಪ್ರವೀಣ್ ಜೋರ್ಡನ್ ಹಾಗೂ ಮಿಲಾಟಿ ಡೆವಾ ಒಕ್ಟಾವಿಯಾಂಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಎಲೈಟ್ ಬ್ಯಾಡ್ಮಿಂಟನ್ ಆಟಗಾರರು ಹಾಗೂ ಜೋಡಿಗಳು ಆರು ವಿಭಾಗಗಳಲ್ಲಿ ತೋರಿದ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತಿದೆ.

ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಈ ವರ್ಷ 11 ಚಿನ್ನ, 3 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಜಯಿಸಿದ್ದು, ವರ್ಷದ ಪುರುಷರ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಸಿಂಧು ಈ ವರ್ಷ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಹೊರತುಪಡಿಸಿ ಬೇರೆ ಪ್ರಶಸ್ತಿ ಜಯಿಸಿಲ್ಲ.

ಮೂರು ಬಿಡಬ್ಲುಎಫ್ ವರ್ಲ್ಡ್ ಟೂರ್ ಪ್ರಶಸ್ತಿ ಜಯಿಸಿರುವ ವಿಶ್ವದ ನಂ.1 ಆಟಗಾರ್ತಿ ತೈ ಝು ಯಿಂಗ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News