ಭಾರತದ ಮಹಿಳಾ ಫುಟ್ಬಾಲ್ ತಂಡಕ್ಕೆ ಭರ್ಜರಿ ಜಯ

Update: 2019-12-05 18:25 GMT

ಪೊಖಾರ(ನೇಪಾಳ),ಡಿ.5: ಮತ್ತೊಂದು ಶ್ರೇಷ್ಠ ಪ್ರದರ್ಶನ ನೀಡಿದ ಭಾರತೀಯ ಮಹಿಳಾ ಫುಟ್ಬಾಲ್ ತಂಡ 13ನೇ ಆವೃತ್ತಿಯ ದಕ್ಷಿಣ ಏಶ್ಯ ನ್ ಗೇಮ್ಸ್‌ನಲ್ಲಿ ಗುರುವಾರ ಶ್ರೀಲಂಕಾವನ್ನು 6-0 ಅಂತರದಿಂದ ಮಣಿಸಿತು. ಈ ಮೂಲಕ ಸತತ ಎರಡನೇ ಗೆಲುವು ದಾಖಲಿಸಿತು.

ಸಂಧ್ಯಾ ರಂಗನಾಥನ್(10ನೇ ಹಾಗೂ 25ನೇ ನಿಮಿಷ)ಹಾಗೂ ರತ್ನಬಾಲಾ ದೇವಿ(18ನೇ ಹಾಗೂ 88ನೇ ನಿಮಿಷ)ತಲಾ ಎರಡು ಗೋಲುಗಳನ್ನು ಗಳಿಸಿದರೆ, ಡಾಂಗ್‌ಮಿ ಗ್ರೇಸ್(7ನೇ) ಹಾಗೂ ರತ್ನಬಾಲಾದೇವಿ(90+1)ತಲಾ ಒಂದು ಗೋಲು ಗಳಿಸಿದರು. ಹಾಲಿ ಚಾಂಪಿಯನ್ ಭಾರತ ಮಂಗಳವಾರ ಆಡಿದ್ದ ತನ್ನ ಮೊದಲ ಪಂದ್ಯದಲ್ಲಿ ಮಾಲ್ಡೀವ್ಸ್ ತಂಡವನ್ನು 5-0 ಅಂತರದಿಂದ ಮಣಿಸಿತು.

ಭಾರತ ಏಳನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿತು. ರಂಜನ ಚಾನು ನೀಡಿದ್ದ ಪಾಸ್ ನೆರವಿನಿಂದ ಡಾಂಗ್‌ಮಿ ಗ್ರೇಸ್ ಭಾರತಕ್ಕೆ 1-0 ಅಂತರದಿಂದ ಮಣಿಸಿತು. 10ನೇ ನಿಮಿಷದಲ್ಲಿ ಗೋಲು ಗಳಿಸಿದ ಸಂಧ್ಯಾ ತಂಡದ ಮುನ್ನಡೆಯನ್ನು 2-0ಗೆ ಏರಿಸಿದರು.

ಕೆಲವೇ ನಿಮಿಷಗಳ ಬಳಿಕ ಮತ್ತೆ ಕಣಕ್ಕಿಳಿದ ಸಂಧ್ಯಾ 18ನೇ ನಿಮಿಷದಲ್ಲಿ ಭಾರತದ ಮುನ್ನಡೆಯನ್ನು 3-0ಗೆ ಹೆಚ್ಚಿಸಿದರು. ಮುಖ್ಯ ಕೋಚ್ ಮೆಮೊಲ್ ರಾಕಿ ಅವರು ಸಂಧ್ಯಾ ಹಾಗೂ ರಂಜನಾ ಬದಲಿಗೆ ದಯಾ ದೇವಿ ಹಾಗೂ ಮನೀಶಾರನ್ನು ಮೈದಾನಕ್ಕಿಳಿಸಿದರು. ಪಂದ್ಯದ ಕೊನೆಯಲ್ಲಿ ಭಾರತದ ಇನ್ನೆರಡು ಗೋಲುಗಳನ್ನು ಗಳಿಸಿತು. ಪಂದ್ಯ ಮುಗಿಯಲು ಎರಡು ನಿಮಿಷ ಬಾಕಿ ಇರುವಾಗ ರತ್ನಬಾಲಾದೇವಿ ಭಾರತದ ಪರ ಆರನೇ ಗೋಲು ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News