ದಾರುಲ್ ಇರ್ಶಾದ್‌ಗೆ 30ರ ಸಂಭ್ರಮ: ಸಾರ್ವಜನಿಕರಿಂದ ಲಾಂಛನ ಆಹ್ವಾನ

Update: 2019-12-06 12:24 GMT

ಮಾಣಿ, ಡಿ.6: ಮೂವತ್ತನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಮಾಣಿ ದಾರುಲ್ ಇರ್ಶಾದ್ ಸಂಸ್ಥೆಯು ಹೊಸ (ಲೋಗೊ) ಲಾಂಛನವನ್ನು ಹೊಂದಲು ಬಯಸುತ್ತಿದ್ದು, ಸಾರ್ವಜನಿಕರಿಂದ ಲಾಂಛನವನ್ನು ಆಹ್ವಾನಿಸಲಾಗಿದೆ.

ಮಾಣಿ ಕೇಂದ್ರವಾಗಿಸಿ ಕಾರ್ಯಾಚರಿಸುತ್ತಿರುವ ದಾರುಲ್ ಇರ್ಶಾದ್ ಅಧೀನದಲ್ಲಿ ಹೈಸ್ಕೂಲ್, ಪಿಯುಸಿ, ದರ್ಸ್, ದಅವಾ ಕಾಲೇಜು, ಹಿಫ್ಳುಲ್ ಕುರ್‌ಆನ್ ಕಾಲೇಜು, ಹನಫಿ ದರ್ಸ್, ಮಹಿಳಾ ಪಿಯುಸಿ, ಮಹಿಳಾ ಶರೀಅತ್ ಕಾಲೇಜು ಸಂಸ್ಥೆಗಳು ಇವೆ. ಇದೀಗ ಸಂಸ್ಥೆಯ ಗುರಿ, ಧ್ಯೇಯವನ್ನು ಬಿಂಬಿಸುವ, ಸರಳ ಹಾಗೂ ಸುಲಲಿತವಾಗಿರುವ, ಆಕರ್ಷಕ ಹಾಗೂ ಅರ್ಥಪೂರ್ಣ ಸೃಜನಶೀಲ ಲಾಂಛನವನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಲಾಂಛನಕ್ಕೆ 5,000 ನಗದು ಬಹುಮಾನ ನೀಡಲಾಗುವುದು ಹಾಗೂ ಅದರ ರಚನೆಕಾರರಿಗೆ ಮೂವತ್ತನೇ ವಾರ್ಷಿಕ ಮಹಾಸಮ್ಮೇಳನದ ವೇದಿಕೆಯಲ್ಲಿ ಗೌರವಿಸಲಾಗುವುದು.

ಲಾಂಛನ ಸಂಸ್ಥೆಗೆ ತಲುಪಲು ಕೊನೆಯ ದಿನಾಂಕ ಡಿ. 25. ಸ್ವರಚಿತ ಲಾಂಛನವನ್ನು Logo, KGN Campus Mithur,Idkidu Post, Bantwal, DK. 574220 ವಿಳಾಸಕ್ಕೆ ಅಂಚೆ ಮೂಲಕ ಅಥವಾ irshadiya@gmail.com ಇಮೇಲ್ ಮೂಲಕ ಕಳುಹಿಸತಕ್ಕದ್ದು. ವಾಟ್ಸಪ್ ಮೂಲಕ ಸ್ವೀಕರಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕಬೀರ್ ಸಖಾಫಿ ಮಾಲಾಡಿ ( ಇರ್ಶಾದಿಯಾ ಮಲ್ಟಿ ಮೀಡಿಯಾ, ಮಿತ್ತೂರು) ಮೊ.ಸಂ.: 96117 60471, ಎ.ಕೆ.ನಂದಾವರ ಮೊ.ಸಂ.: 9844435004ನನ್ನು ಸಂಪರ್ಕಿಸುವಂತೆ ದಾರುಲ್ ಇರ್ಶಾದ್ ಮ್ಯಾನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಶರೀಫ್ ಸಖಾಫಿ ಮಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News