ಮುಹಮ್ಮದ್ ಅಝರುದ್ದೀನ್ ಸ್ಟೇಡಿಯಂ ಸ್ಟ್ಯಾಂಡ್ ಉದ್ಘಾಟನೆ

Update: 2019-12-06 18:06 GMT

ಹೈದರಾಬಾದ್, ಡಿ.6: ಭಾರತದ ಮಾಜಿ ನಾಯಕ ಹಾಗೂ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷ ಮುಹಮ್ಮದ್ ಅಝರುದ್ದೀನ್‌ಗೆ ಗೌರವ ನೀಡುವ ಸಲುವಾಗಿ ರಾಜೀವ್‌ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನ ನವೀಕರಿಸಿದ ನಾರ್ತ್ ಸ್ಟಾಂಡ್‌ಗೆ ಅಝರುದ್ದೀನ್ ಹೆಸರಿಡಲಾಗಿದ್ದು, ಈ ಸ್ಟಾಂಡ್‌ನ್ನು ಬ್ಯಾಟಿಂಗ್ ದಂತಕತೆ ವಿವಿಎಸ್ ಲಕ್ಷ್ಮಣ್ ಶುಕ್ರವಾರ ಉದ್ಘಾಟಿಸಿದರು.

ಲಕ್ಷ್ಮಣ್ ದಾರವನ್ನು ಕತ್ತರಿಸುವ ಮೂಲಕ ಅಝರುದ್ದೀನ್ ಸ್ಟಾಂಡ್‌ನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಭಾರತದ ಮಾಜಿ ಆಫ್ ಸ್ಪಿನ್ನರ್ ನೊಯೆಲ್ ಡೇವಿಡ್, ವೆಂಕಟಪತಿ ರಾಜು ಹಾಗೂ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಉಪಸ್ಥಿತರಿದ್ದರು. ನನಗೆ ಇಂತಹ ಗೌರವ ನೀಡಿದ್ದಕ್ಕೆ ತುಂಬಾ ಖುಷಿಯಾಗಿದೆ. ನಾನು ಯಾವಾಗಲೂ ನೈಜ ಸ್ಫೂರ್ತಿಯಿಂದ ಕ್ರಿಕೆಟ್ ಆಡುತ್ತಿದ್ದೆ. ಹೈದರಾಬಾದ್ ಕ್ರಿಕೆಟ್ ಬೆಳವಣಿಗೆಗೆ ಶ್ರಮವಹಿಸುವೆ ಎಂದು ಅಝರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News