ಭಾರತದ ಮಾಜಿ ಟಿಟಿ ಕೋಚ್ ಭವಾನಿ ಮುಖರ್ಜಿ ಇನ್ನಿಲ್ಲ

Update: 2019-12-06 18:14 GMT

ಚಂಡಿಗಢ, ಡಿ.6: ಭಾರತದ ಮಾಜಿ ಟೇಬಲ್ ಟೆನಿಸ್ ಮುಖ್ಯ ಕೋಚ್ ಭವಾನಿ ಮುಖರ್ಜಿ ಶುಕ್ರವಾರ ನಿಧನರಾಗಿದ್ದು, ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಮುಖರ್ಜಿ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಇಂದು ಅವರ ನಿವಾಸದಲ್ಲಿ ನಿಧನರಾದರು ಎಂದು ಟಿಟಿಎಫ್‌ಐ ಪ್ರಧಾನ ಕಾರ್ಯದರ್ಶಿ ಎಂ.ಪಿ.ಸಿಂಗ್ ಹೇಳಿದ್ದಾರೆ. ಮುಖರ್ಜಿ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಿದ ಮೊದಲಿಗನಾಗಿದ್ದರು. ಮುಖರ್ಜಿ ತಂದೆ ವೃತ್ತಿಯಲ್ಲಿ ವೈದ್ಯರಾಗಿದ್ದ ಕಾರಣ ಅಜ್ಮೇರ್‌ನಲ್ಲಿ ಪ್ರಾಥಮಿಕ ಶಾಲೆ ಹಾಗೂ ಪದವಿ ಶಿಕ್ಷಣ ಪಡೆದಿದ್ದರು. ಕೋಚಿಂಗ್‌ನಲ್ಲಿ ಡಿಪ್ಲೋಮಾ ಪಡೆದಿದ್ದ ಮುಖರ್ಜಿ 70ರ ದಶಕದಲ್ಲಿ ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆ(ಎನ್‌ಐಎಸ್)ಗೆ ಸೇರ್ಪಡೆಯಾಗಿದ್ದರು. ಎನ್‌ಐಎಸ್ ಪಾಟಿಯಾಲದ ಮುಖ್ಯ ಕೋಚ್ ಆಗಿದ್ದ ಮುಖರ್ಜಿ 2010ರ ಕಾಮನ್‌ವೆಲ್ತ್ ಗೇಮ್ಸ್ ಬಳಿಕ ಸ್ವಲ್ಪ ಸಮಯ ರಾಷ್ಟ್ರೀಯ ತಂಡದ ಕೋಚ್ ಆಗಿದ್ದರು. ಸೌಮ್ಯಜೀತ್ ಘೋಷ್ ಹಾಗೂ ಅಂಕಿತಾ ದಾಸ್‌ರೊಂದಿಗೆ ಲಂಡನ್ ಒಲಿಂಪಿಕ್ ್ಸಗೆ ತೆರಳಿದ್ದ ಮುಖರ್ಜಿ ಕ್ರೀಡಾ ಪ್ರಾಧಿಕಾರ(ಸಾಯ್)ದಿಂದ ನಿವೃತ್ತಿಯಾಗುವ ಮೊದಲು 34 ವರ್ಷಗಳ ಕಾಲ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಸೇವೆ ಸಲ್ಲಿಸಿದ್ದರು. 2012ರಲ್ಲಿ ಕ್ರೀಡೆಗೆ ನೀಡಿದ್ದ ಅಪೂರ್ವ ಕೊಡುಗೆಗೆ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News