ಬಂಟ್ವಾಳ : ಶಾಸಕರ ಅನುದಾನದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ

Update: 2019-12-07 08:28 GMT

ಬಂಟ್ವಾಳ : ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ಸುಮಾರು 2  ಕೋಟಿ ರೂ. ಶಾಸಕರ ಅನುದಾನದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ ಕಾರ್ಯಕ್ರಮ ಶನಿವಾರ ರಾಯಿ, ಕೊಯಿಲ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯಿತು.

ದೈಲಾ-ಲಕ್ಷ್ಮೀಕೋಡಿ ರಸ್ತೆ: ಶಾಸಕರ  ಅನುದಾನದ 1.53 ಕೋಟಿ ರೂ. ವೆಚ್ಚದಲ್ಲಿ ಬಂಟ್ವಾಳ ತಾಲೂಕಿನ ರಾಯಿ ಗ್ರಾಮದ ದೈಲಾ-ಲಕ್ಷ್ಮೀಕೋಡಿವರೆಗಿನ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.

ಇಲ್ಲಿನ ತೆಂಕಾಯಿಬೊಟ್ಟು ಎಂಬಲ್ಲಿ ದೇವಸ್ಥಾನದ ಪ್ರಧಾನ ರಾಮಚಂದ್ರ ಭಟ್ ಅವರು ಧಾರ್ಮಿಕವಿಧಿ ವಿಧಾನ ನೆರವೇರಿಸಿದರು.
ಬಳಿಕ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಬಂಟ್ವಾಳ ಉಪವಿಭಾಗದಡಿ ಸುಮಾರು‌ 2 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ ಕಾರ್ಯ ನಡೆಯುತ್ತಿವೆ. ಸುಮಾರು 1.53 ಕೋಟಿ ವೆಚ್ಚದಲ್ಲಿ ದೈಲಾ-ಲಕ್ಷ್ಮೀಕೋಡಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಈ ರಸ್ತೆಯು ಸಂಪೂರ್ಣ ಕಾಂಕ್ರೀಟ್ ರಸ್ತೆಯಾಗಿದ್ದು, ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

2019-20ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಅಂದಾಜು 10 ಲಕ್ಷ ರೂ. ವೆಚ್ಚದಲ್ಲಿ ಕೊಯಿಲ ಗ್ರಾಮದ ಗುತ್ತುವಿನಿಂದ ಅಮ್ಮೇಲವರೆಗಿನ (ಪರಿಶಿಷ್ಟ ಜಾತಿ) ಕಾಂಕ್ರಿಟ್ ರಸ್ತೆ ಕಾಮಗಾರಿ ಹಾಗೂ ರಾಯಿ ಗ್ರಾಮದ ಮಾನಡ್ಕದಿಂದ ರಾಮೇರಿ ಪರಿಶಿಷ್ಟ ಪಂಗಡ ಕಾಲನಿಗೆ 10 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, 5 ಲಕ್ಷ ರೂ. ರಾಯಿ ಗ್ರಾಮದ ರಾಯಿ ಬಜಲೋಡಿ ರಸ್ತೆ ಕಾಮಗಾರಿ, 10 ಲಕ್ಷ ರೂ. ನೀರಳಿಕೆ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನಡೆದಿದೆ ಎಂದರು.

ಈ ಸಂದರ್ಭ ಜಿಪಂ ಸದಸ್ಯ ತುಂಗಪ್ಪ ಬಂಗೇರ, ರಾಯಿ ಗ್ರಾಪಂ ಅಧ್ಯಕ್ಷ  ದಯಾನಂದ ಸಪಲ್ಯ, ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ಹರೀಶ್ ರಾಯಿ, ರಾಘವ ಅಮೀನ್, ಪದ್ಮನಾಭ ಗೌಡ, ಪ್ರಮುಖರಾದ ಎಂ.ಪಿ.ದಿನೇಶ್, ವಿಶ್ವನಾಥ ಗೌಡ, ಸಂತೋಷ್ ರಾಯಿಬೆಟ್ಟು, ವಸಂತ ಗೌಡ, ಪರಮೇಶ್ವರ ಪೂಜಾರಿ, ಕೃಷ್ಣ ಭಟ್, ಸಂತೋಷ್ ಗೌಡ, ಸುಂದರ ಪೂಜಾರಿ, ಚಂದ್ರಶೇಖರ ಗೌಡ, ಇಂದಿರಾ, ರಮಾನಾಥ ರಾಯಿ, ಶೀತಲ, ಸದಾನಂದ ಗೌಡ ಮತ್ತಾವು, ರಾಜೇಶ್ ಶೆಟ್ಟಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News