​ಹೊಕ್ಕಾಡಿಗೋಳಿ: ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Update: 2019-12-07 08:33 GMT

ಬಂಟ್ವಾಳ: ತುಳುನಾಡಿನಲ್ಲಿ ಅನಾದಿ ಕಾಲದಿಂದ ಕೖಷಿಕರು ನಡೆಸಿಕೊಂಡು ಬರುತ್ತಿರುವ ಸಾಂಪ್ರದಾಯಿಕ ಮತ್ತು ಅಹಿಂಸಾತ್ಮಕ ಕಂಬಳ ವಿಶೇಷ ಧಾಮಿ೯ಕ ನಂಟು ಮತ್ತು ನಂಬಿಕೆ ಆಧಾರದಲ್ಲಿ ನಡೆಯುತ್ತಿದೆ ಎಂದು ಪೂಂಜ  ಶ್ರೀ ಪಂಚದುಗಾ೯ಪರಮೇಶ್ವರಿ ಕ್ಷೇತ್ರದ ಅಸ್ರಣ್ಣ ಕೃಷ್ಣ ಪ್ರಸಾದ್ ಆಚಾಯ೯ ಹೇಳಿದ್ದಾರೆ.

ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕಿನ ಗಡಿ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕಂಬಳ ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಕೂಳೂರು ಪೊಯ್ಯೊಲು ಮಾತನಾಡಿ, ಸುಪ್ರೀಂ ಕೋಟಿ೯ನ ನಿದೇ೯ಶನದಂತೆ ಜಿಲ್ಲೆಯಲ್ಲಿ ಅಹಿಂಸಾತ್ಮಕ ಕಂಬಳ ನಡೆಸಲು ಜಿಲ್ಲಾ ಸಮಿತಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಶಿಸ್ತು ಮತ್ತು ನಿಯಮಾವಳಿ ಉಲ್ಲಂಘಿಸಿದ ಕೋಣಗಳನ್ನು ಮುಂದಿನ ಕಂಬಳದಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಅವರು  ಎಚ್ಚರಿಸಿದರು.

ಜಿಲ್ಲಾ ಸಮಿತಿ ನಿಕಟಪೂವ೯ ಕಾಯ೯ದಶಿ೯ ವಿಜಯ ಕುಮಾರ್ ಕಂಗಿನಮನೆ ಮಾತನಾಡಿ, ಶಿಸ್ತುಬದ್ಧ ಕಂಬಳಕ್ಕೆ ರಾಜ್ಯ ಮತ್ತು ಕೇಂದ್ರ ಸಕಾ೯ರದ ಬೆಂಬಲವೂ ಸಿಗಲಿದೆ ಎಂದರು. ಜಿಲ್ಲಾ ಸಮಿತಿ ಪ್ರಧಾನ ಕಾಯ೯ದಶಿ೯ ಎಡ್ತೂರು ರಾಜೀವ ಶೆಟ್ಟಿ, 
ಎಪಿಎಂಸಿ ಮಾಜಿ ಸದಸ್ಯ ರತ್ನಕುಮಾರ್ ಚೌಟ, ಸ್ಥಳೀಯ ವೈದ್ಯರಾದ ಡಾ.ಸುದೀಪ್ ಕುಮಾರ್ ಜೈನ್, ಉದ್ಯಮಿ ಟಿ.ನರಸಿಂಹ ಪೈ ಮಾವಿನಕಟ್ಟೆ, ದಿನೇಶ ಮೈಂದಬೆಟ್ಟು ರಾಯಿ ಮತ್ತಿತರರು ಶುಭ ಹಾರೈಸಿದರು.

ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಗ್ರಾ.ಪಂ.ಅಧ್ಯಕ್ಷ ಪ್ರಭಾಕರ ಎಚ್. ಹುಲಿಮೇರು, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಸಮಿತಿ ಗೌರವ ಸಲಹೆಗಾರರಾದ ಬಾಬು ರಾಜೇಂದ್ರ ಶೆಟ್ಟಿ ಅಜ್ಜಾಡಿ, ಕಿರಣ್ ಕುಮಾರ್ ಮಂಜಿಲ, ಪದಾಧಿಕಾರಿಗಳಾದ ಎಚ್.ಹರೀಶ ಹಿಂಗಾಣಿ, ಸಂದೇಶ ಶೆಟ್ಟಿ ಪೊಡುಂಬ, ಪುಷ್ಪರಾಜ್ ಜೈನ್ ನಡ್ಯೋಡಿ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ರಾಜೇಶ ಶೆಟ್ಟಿ ಕೊನೆರೊಟ್ಟು, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಜನಾಧ೯ನ  ಬಂಗೇರ ತಿಮರಡ್ಕ, ನಿತ್ಯಾನಂದ ಪೂಜಾರಿ ಕೆಂತಲೆ, ಕೖಷ್ಣ ಶೆಟ್ಟಿ ಉಮನೊಟ್ಟು ಮತ್ತಿತರರು ಸಹಿತ  ಸ್ಥಳದಾನಿಗಳು ಇದ್ದರು.

ಸಮಿತಿ ಗೌರವ ಸಲಹೆಗಾರ ವಕೀಲ ಸುರೇಶ ಶೆಟ್ಟಿ ಸ್ವಾಗತಿಸಿ, ಪ್ರಚಾರ ಸಮಿತಿ ಸಂಚಾಲಕ ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News