ಮಂಗಳೂರು: ಯುನಿಟಿ ಅಲುಮ್ನಿ ಮೀಟ್ ಸಂಭ್ರಮಾಚರಣೆ

Update: 2019-12-07 09:30 GMT

ಮಂಗಳೂರು : ಯುನಿಟಿ ಅಲುಮ್ನಿ ಅಸೋಸಿಯೇಶನ್ ಮಂಗಳೂರು ವತಿಯಿಂದ ನಗರದ ಐಎಂಎ ಸಭಾಂಗಣದಲ್ಲಿ ಶನಿವಾರ ಯುನಿಟಿ ಅಲುಮ್ನಿ ಮೀಟ್ ಸಂಭ್ರಮಾಚರಣೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೀನಿಯರ್ ಕನ್ಸಲ್ಟಂಟ್ ನ್ಯೂರೋ ಸರ್ಜನ್ ಡಾ.ಕೆ.ವಿ.ದೇವಾಡಿಗ, ಯುನಿಟಿ ಆಸ್ಪತ್ರೆಯು ಕರಾವಳಿಯಲ್ಲಿ ಭಾಗದಲ್ಲಿ ಉತ್ತಮ ಸೇವೆ ನೀಡುತ್ತಿದೆ. ಅಲುಮ್ನಿ ಸಮಾರಂಭ ಆಯೋಜನೆಯಿಂದ ವಿದ್ಯಾರ್ಥಿಗಳಿಗೆ ತುಂಬ ಸಹಕಾರಿಯಾಗಲಿದೆ ಎಂದರು.

ಅಲುಮ್ನಿ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಿಂದ ವೈದ್ಯಕೀಯ ವಿದ್ಯಾರ್ಥಿಗಳು ಸಲಹೆ-ಸೂಚನೆಗಳನ್ನು ಪಡೆದುಕೊಳ್ಳಬಹು ದಾಗಿದೆ. ಜತೆಗೆ ವೈದ್ಯರು ತಮ್ಮ ವೃತ್ತಿ ಬದುಕಿನ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬಹುದು. ವಿದ್ಯಾರ್ಥಿಗಳು, ವೈದ್ಯರು, ಅಲುಮ್ನಿ ನಿರಂತರವಾಗಿ ಸಂಪರ್ಕದಲ್ಲಿರಬೇಕು ಎಂದು ಹೇಳಿದರು.

ಸೀನಿಯರ್ ಕನ್ಸಲ್ಟಂಟ್ ಕಾರ್ಡಿಯಾಲಜಿಸ್ಟ್ ಡಾ.ಎ.ವಿ.ಶೆಟ್ಟಿ ಮಾತನಾಡಿ,  ವೈದ್ಯಕೀಯ ಕ್ಷೇತ್ರದಲ್ಲಿ ಕರಾವಳಿಯ ಆಸ್ಪತ್ರೆ ಮತ್ತು ಕಾಲೇಜುಗಳು ಹಲವು ಪ್ರಥಮಗಳನ್ನು ದಾಖಲಿಸಿವೆ. ವೈದ್ಯಕೀಯ ವಿಭಾಗದ ನರ್ಸಿಂಗ್ ನಲ್ಲಿ ಕೇರಳದ ಮಲಯಾಳಿಗಳ ಸಂಖ್ಯೆಯೇ ಅಧಿಕ ಪ್ರಮಾಣದಲ್ಲಿದೆ. ಯುನಿಟಿ ಆಸ್ಪತ್ರೆಯು ಕರಾವಳಿ ಭಾಗದಲ್ಲಿಯೇ ಅತ್ಯುತ್ತಮ ಸೇವೆ ನೀಡುತ್ತಾ ಬಂದಿರುವ ಪ್ರತಿಷ್ಠಿತ ಆಸ್ಪತ್ರೆಯಾಗಿದೆ ಎಂದರು.

ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮಂಗಳೂರು ಅಧ್ಯಕ್ಷ ಡಾ.ಎಂ.ಅಣ್ಣಯ್ಯ ಕುಲಾಲ್ ಯು. ಮಾತನಾಡಿ, ಯುನಿಟಿ ಆಸ್ಪತ್ರೆಯಲ್ಲಿ ತರಬೇತಿ ಪಡೆದ ವೈದ್ಯರು ಪ್ರಪಂಚದ ಮೂಲೆಮೂಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾನು ಕೂಡ ಹಲವು ಚಾಲೆಂಜಿಂಗ್ ಕೇಸ್‌ಗಳನ್ನು ಎದುರಿಸುವಲ್ಲಿ ಯಶಸ್ವಿಯಾಗಿದ್ದೇನೆ. ಹಿರಿಯ ವೈದ್ಯರಿಂದ ಕಲಿತುಕೊಳ್ಳುವುದು ಇನ್ನೂ ಹೆಚ್ಚು ಇದೆ ಎಂದು ಹೇಳಿದರು.

ಯುನಿಟಿ ಕೇರ್ ಆ್ಯಂಡ್ ಹೆಲ್ತ್ ಸರ್ವಿಸೆಸ್‌ನ ಚೇರ್‌ಮನ್ ಡಾ.ಸಿ.ಪಿ.ಹಬೀಬ್ ರಹ್ಮಾನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ. ಕೆ.ಆರ್.ಶೆಟ್ಟಿ, ಡಾ.ವಸಂತಿ ಶೆಟ್ಟಿ, ಡಾ.ಹುಸೈನ್ ಕುಂಞಿ, ಡಾ.ಸಿ.ಆರ್.ಕಾಮತ್, ಡಾ.ತಂಗಮ್, ಡಾ.ಜೋ ವರ್ಗೀಸ್, ಡಾ.ಭಾಸ್ಕರ್ ಶೆಟ್ಟಿ, ಡಾ.ಫುರ್ತಾಡೊ ಎಚ್.ಡಬ್ಲ್ಯೂ., ಡಾ.ಹಾಝೆಲ್ ಫುರ್ತಾಡೊ, ಡಾ.ನವೀನ್‌ಚಂದ್ರ ಶೆಟ್ಟಿ ಸೇರಿದಂತೆ ಹಲವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಯುನಿಟಿ ಅಲುಮ್ನಿ ಅಸೋಸಿಯೇಶನ್ ಅಧ್ಯಕ್ಷೆ ಡಾ.ಬೀನಾ ಪೈಸ್, ಉಪಾಧ್ಯಕ್ಷೆ ಡಾ.ಅಲ್ಫೋನ್ಸಾ ರಹಮಾನ್, ಕಾರ್ಯದರ್ಶಿ ಯು.ಕೆ.ಖಾಲಿದ್ ಉಪಸ್ಥಿತರಿದ್ದರು.

ಯುನಿಟಿ ಅಲುಮ್ನಿ ಅಸೋಸಿಯೇಶನ್ ಅಧ್ಯಕ್ಷೆ ಡಾ.ಬೀನಾ ಪೈಸ್ ಸ್ವಾಗತಿಸಿದರು. ದೇವರಾಜ ಜಿ.ಎಂ. ಅತಿಥಿಗಳನ್ನು ಪರಿಚಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News