ಬಿ.ಸಿ ರೋಡ್ ಪಾಲಿಕ್ಲಿನಿಕ್ ವತಿಯಿಂದ ವೈದ್ಯರುಗಳಿಗೆ ಸಿಎಮ್ಇ, ಸನ್ಮಾನ ಕಾರ್ಯಕ್ರಮ

Update: 2019-12-07 09:54 GMT

ಬಂಟ್ವಾಳ : ಬಿ.ಸಿ ರೋಡ್ ಪಾಲಿಕ್ಲಿನಿಕ್ ಮತ್ತು 'ಲೈಫ್ ಲೈನ್ ಹೆಲ್ತ್ ಕೇರ್ ಪ್ಲಸ್' ಇದರ ಜಂಟಿ ಆಶ್ರಯದಲ್ಲಿ ವೈದ್ಯರುಗಳಿಗೆ ಸಿಎಮ್ಇ ಕಾರ್ಯಕ್ರಮವು ಬಿ.ಸಿ ರೋಡಿನ ಹೋಟೆಲ್ ರಂಗೋಲಿಯಲ್ಲಿ ಗುರುವಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಯೆನಪೋಯ ಮೆಡಿಕಲ್ ಕಾಲೇಜಿನ ಮಾನಸ ರೋಗ ವಿಭಾಗದ ಅಸಿಸ್ಟಂಟ್ ಪ್ರೊ. ಡಾ. ರವಿಚಂದ್ರ ಕಾರ್ಕಳ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿ.ಸಿ ರೋಡ್ ಪಾಲಿಕ್ಲಿನಿಕ್ ನಲ್ಲಿ ಹಲವು ವರ್ಷಗಳ ಕಾಲ ಕಿವಿ, ಮೂಗು ಮತ್ತು ಗಂಟಲು ರೋಗ ತಜ್ಞರಾಗಿ ಸೇವೆ ಸಲ್ಲಿಸಿ ಪ್ರಸಕ್ತ ಯೆನಪೋಯ ಯುನಿವರ್ಸಿಟಿಯಲ್ಲಿ ರಿಜಿಸ್ಟ್ರಾರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಗಂಗಾದರ್ ಸೋಮಯಾಜಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ  40ಕ್ಕೂ ಅಧಿಕ ವೈದ್ಯರುಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News