ಉದ್ದಿಮೆಗಳಲ್ಲಿ ಸುಸ್ಥಿರತೆಗೆ ಸಮರ್ಪಕ ಆರ್ಥಿಕ ನಿರ್ವಹಣೆ ಮುಖ್ಯ: ಬಾಲಚಂದ್ರ ವೈ.ವಿ

Update: 2019-12-07 11:27 GMT

ಮಂಗಳೂರು : ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಲ್ಲಿ ಸುಸ್ಥಿರತೆಗೆ ಸಮರ್ಪಕ ಆರ್ಥಿಕ ನಿರ್ವಹಣೆ ಮುಖ್ಯ ಎಂದು ಕರ್ಣಾಟಕ ಬ್ಯಾಂಕ್ ನ ಮುಖ್ಯ ನಿರ್ವಹಣಾಧಿಕಾರಿ ಬಾಲಚಂದ್ರ ವೈ.ವಿ ತಿಳಿಸಿದ್ದಾರೆ.

ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ಕ್ಷೇತ್ರದ ಸಶಕ್ತತೆ ಮತ್ತು ಸುಸ್ಥಿರ ಬೆಳವಣಿಗೆ ಬಗ್ಗೆ ನಿಟ್ಟೆ ವಿ.ವಿ ಮತ್ತು ಕರ್ಣಾಟಕ ಬ್ಯಾಂಕ್ ಸಹಯೋಗ ದೊಂದಿಗೆ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡ ಸಮಾವೇಶ ಮತ್ತು ಪ್ರಶಸ್ತಿ ವಿತರಣಾ ಸಮಾರಂಭ ವನ್ನು ಉದ್ದೇಶಿಸಿ ಮಾತನಾಡುತ್ತಿದ್ದರೆ.

ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ಕ್ಷೇತ್ರದಲ್ಲಿ ಸುಸ್ಥಿರ ಬೆಳವಣಿಗೆ ಅಗತ್ಯ ವಿದೆ.  ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ಕ್ಷೇತ್ರದಲ್ಲಿ ಹಣಕಾಸು ವ್ಯವಹಾರದಲ್ಲಿನ ವ್ಯವಸ್ಥೆಯ ನಿಭಾಯಿಸುವಲ್ಲಿನ ಲೋಪ ದಿಂದ ಸಾಕಷ್ಟು ಉದ್ಯಮಿಗಳಿಗೆ ನೀಡಿದ ಸಾಲಗಳು ಅನುತ್ಪಾದಕ ಸಾಲಗಳಾಗಿ ಪರಿವರ್ತನೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬ್ಯಾಂಕ್ ಗಳು ತ್ವರಿತವಾಗಿ ಸಾಲ ಮಂಜೂರು ಮಾಡಬೇಕೆನ್ನುವುದು ಉದ್ಯಮಿಗಳ ನಿರೀಕ್ಷೆಯಾಗಿರಿತ್ತದೆ. ಈ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ಆಧುನಿಕ ತಂತ್ರಜ್ಞಾನದ ನೆರವಿನಿಂದ ಸಾಲ ನೀಡುವ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆದು ಕೊಳ್ಳಬೇಕೆಂದು ಬಾಲಚಂದ್ರ ಕರೆ ನೀಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜೈಪುರ ಎನ್ಐಎಎಂ ಕೇಂದ್ರ ದ ಮಹಾನಿರ್ದೇಶಕ ಡಾ.ಪಿ. ಚಂದ್ರಶೇಖರ್ ಮಾತನಾಡುತ್ತಾ, ದೇಶದಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿರುವ ಕೃಷಿ ರಂಗದಿಂದ ಪ್ರತಿವರ್ಷ 2400 ರೈತರು ಹೊರ ಬರುತ್ತಿದ್ದಾರೆ. ಕ್ರಷಿ ಕ್ಷೇತ್ರದಲ್ಲಿ ಶೇ 22.5ರಷ್ಟು ರೈತರು ಬಡತನ ರೇಖೆಗಿಂತ ಕೆಳಗಿದ್ದಾರೆ. ಉದಾಹರಣೆಗೆ ರೈತರು ಬೆಳೆದ ಉತ್ಪನ್ನಗಳು 100 ರೂ.ಗೆ ಮಾರಾಟವಾದರೆ ಬೆಳೆದ ರೈತನಿಗೆ ದೊರೆಯುವುದು 28 ರೂ. ಮಾತ್ರ. ಈ ನಿಟ್ಟಿನಲ್ಲಿ ಸುಸ್ಥಿರ ಉದ್ಯಮ ವಾಗಿ ಕೃಷಿ ಕ್ಷೇತ್ರ ಬೆಳೆಯ ಬೇಕಾಗಿದೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಐಸಿಎಐ ಉಪಾಧ್ಯಕ್ಷ ಎಸ್‌.ಎಸ್. ನಾಯಕ್, ಉದ್ಯಮಿ ಉಲ್ಲಾಸ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News