ನಬಿ ದಾಖಲೆ ಸರಿಗಟ್ಟಿದ ವಿರಾಟ್

Update: 2019-12-07 18:05 GMT

ಹೈದರಾಬಾದ್, ಡಿ.7: ವಿಂಡೀಸ್ ವಿರುದ್ಧ ಶುಕ್ರವಾರ ಹೈದರಾಬಾದ್‌ನಲ್ಲಿ ವಿರಾಟ್ ಕೊಹ್ಲಿಯ ಮತ್ತೊಂದು ವಿಶೇಷ ಇನಿಂಗ್ಸ್ಸ್ ಆಗಿದ್ದು, ಭಾರತದ ಕ್ರಿಕೆಟ್ ತಂಡದ ನಾಯಕ ಅಜೇಯ 94 ರನ್ ಗಳಿಸಿ ಭಾರತ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ದಾಖಲೆಯ ರನ್ ಚೇಸ್‌ನಲ್ಲಿ ಕೊಹ್ಲಿ ಅದ್ಭುತ ವೇಗವನ್ನು ಪಡೆದರು ಮತ್ತು ಆರು ಬೌಂಡರಿಗಳು ಮತ್ತು ಆರು ಸಿಕ್ಸರ್‌ಗಳೊಂದಿಗೆ ವೆಸ್ಟ್ ಇಂಡೀಸ್ ಬೌಲರ್‌ಗಳ ಬೆವರಿಳಿಸಿದರು.

ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯುವ ಮೂಲಕ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅಫ್ಘಾನಿಸ್ತಾನದ ಮುಹಮ್ಮದ್ ನಬಿ ದಾಖಲೆಯನ್ನು ಸರಿಗಟ್ಟಿದ್ದಾರೆ

208 ರನ್‌ಗಳ ಸವಾಲನ್ನು ಹೊಂದಿದ್ದ ಭಾರತ ಎಂಟು ಎಸೆತಗಳನ್ನು ಉಳಿಸಿಕೊಂಡು ಗೆಲುವು ದಾಖಲಿಸಿತು. ಕೊಹ್ಲಿ 35 ಎಸೆತಗಳ ಅರ್ಧಶತಕ ದಾಖಲಿಸಿದರು. ಇದು ಟ್ವೆಂಟಿ-20ಯಲ್ಲಿ ಭಾರತವು ಬೆನ್ನಟ್ಟಿದ ಅತಿ ದೊಡ್ಡ ಸವಾಲಾಗಿದ್ದು, 2009ರಲ್ಲಿ ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ 207ರನ್‌ಗಳ ಸವಾಲನ್ನು ಪಡೆದಿತ್ತು. ಕೊಹ್ಲಿ 23ನೇ ಬಾರಿ ಟ್ವೆಂಟಿ-20ಯಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News