ಆಸ್ಟ್ರೇಲಿಯನ್ ಓಪನ್ ಬಳಿಕ ಟೆನಿಸ್‌ನಿಂದ ನಿವೃತ್ತಿ: ವೋಝ್ನಿಯಾಕಿ

Update: 2019-12-07 18:08 GMT

ಕೋಪನ್‌ಹ್ಯಾಗನ್, ಡಿ.7: ಮಾಜಿ ವಿಶ್ವ ನಂಬರ್ ಒನ್ ಕ್ಯಾರೋಲಿನ್ ವೋಝ್ನಿಯಾಕಿ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿ ಬಳಿಕ ಟೆನಿಸ್‌ನಿಂದ ನಿವೃತ್ತರಾಗುವುದಾಗಿ ಪ್ರಕಟಿಸಿದ್ದಾರೆ.

ವೋಝ್ನಿಯಾಕಿ 30 ಡಬ್ಲುಟಿಎ ಸಿಂಗಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.

ಕಳೆದ ವರ್ಷ ಮೆಲ್ಬೋರ್ನ್‌ನಲ್ಲಿ ಜಯಗಳಿಸಿದ್ದ 29ರ ಹರೆಯದ ವೋಝ್ನಿಯಾಕಿ ತನ್ನ ನಿವೃತ್ತಿಗೂ ತನ್ನ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ವೃತ್ತಿಪರ ಬಾಸ್ಕೆಟ್‌ಬಾಲ್ ಆಟಗಾರ ಪತಿ ಡೇವಿಡ್ ಲೀ ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಬಯಸಿರುವುದಾಗಿ ಹೇಳಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಂಧಿವಾತದೊಂದಿಗಿನ ಹೋರಾಟದ ಅನುಭವವನ್ನು ವೋಝ್ನಿಯಾಕಿ ತೆರೆದಿಟ್ಟಿದ್ದಾರೆ. ಹಾಸಿಗೆಯಿಂದ ಹೊರಬರಲು ಕಷ್ಟವಾಗಿದ್ದರೂ 2018ನೇ ವರ್ಷವನ್ನು 3ನೇ ಸ್ಥಾನದೊಂದಿಗೆ ಕೊನೆಗೊಳಿಸಿದ್ದೆ. ಟೆನಿಸ್ ವೃತ್ತಿ ಬದುಕಿನಲ್ಲಿ ತಾನು ಕಂಡಿರುವ ಎಲ್ಲ ಕನಸುಗಳನ್ನು ಸಾಧಿಸಿದೆ ಎಂದು ವೋಝ್ನಿಯಾಕಿ ತಿಳಿಸಿದ್ದಾರೆ. ವೋಝ್ನಿಯಾಕಿ 30 ಡಬ್ಲುಟಿಎ ಸಿಂಗಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ ಮತ್ತು 2008 ರಿಂದ 2016 ರವರೆಗೆ ಮೂರು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಡೆನ್ಮಾರ್ಕ್ ತಂಡವನ್ನು ಪ್ರತಿನಿಧಿಸಿದ್ದಾರೆ.

ಗಾಯದ ಕಾರಣದಿಂದಾಗಿ ಈ ವರ್ಷ ಏನನ್ನು ಸಾಧಿಸಲು ಅವರಿಗೆ ಸಾಧ್ಯವಾಗಲಿಲ್ಲ. 2018 ರಲ್ಲಿ ನಡೆದ ಚೀನಾ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News