ಅಪಾಯಕಾರಿಯಾಗಿ ಪರಿಣಮಿಸಿರುವ ಎಂಸಿಜಿ ಪಿಚ್

Update: 2019-12-07 18:10 GMT

ಮೆಲ್ಬೋರ್ನ್, ಡಿ.7: ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್ ತಂಡಗಳ ನಡುವಿನ ಬಾಕ್ಸಿಂಗ್ ದಿನದ ಟೆಸ್ಟ್ ಪಂದ್ಯಕ್ಕೆ ಕೇವಲ ಮೂರು ವಾರಗೂ ಬಾಕಿ ಉಳಿದಿವೆ. ಆದರೆ ಈ ಟೆಸ್ಟ್ ನಡೆಯಲಿರುವ ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ) ಪಿಚ್ ಶನಿವಾರ ಅಪಾಯಕಾರಿಯಾಗಿ ಕಾಣಿಸಿಕೊಂಡಿತು.

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ವಿಕ್ಟೋರಿಯಾ ಮತ್ತು ವೆಸ್ಟರ್ನ್ ಆಸ್ಟ್ರೇಲಿಯ ತಂಡಗಳ ನಡುವಿನ ಶೆಫೀಲ್ಡ್ ಶೀಲ್ಡ್ ಪಂದ್ಯದ ಮೊದಲ ದಿನದ ಆಟವನ್ನು ಪಿಚ್ ಅಪಾಯಕಾರಿ ಗೋಚರಿಸಿದ ಹಿನ್ನೆಲೆಯಲ್ಲಿ ಆಟವನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿದೆ. ಮೊದಲ ದಿನ ಕೇವಲ 40 ಓವರ್‌ಗಳ ಆಟ ಸಾಧ್ಯವಾಯಿತು ಪಿಚ್ ಆಟವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದ ಅಂಪೈರ್‌ಗಳು ಆಟವನ್ನು ಸ್ಥಗಿತಗೊಳಿಸಿದರು. ಈ ಕಾರಣದಿಂದಾಗಿ ಆಸ್ಟ್ರೇಲಿಯದ ಆಟಗಾರರಿಗೆ ಪಿಚ್ ಬಗ್ಗೆ ಭೀತಿ ಉಂಟಾಗಿದೆ. ವಿಕ್ಟೋರಿಯಾ ವಿರುದ್ಧದ ಪಂದ್ಯದ ಮೊದಲ ದಿನವಾಗಿರುವ ಶನಿವಾರ ವೆಸ್ಟರ್ನ್ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ಗಳಾದ ಶಾನ್ ಮಾರ್ಷ್ ಮತ್ತು ಮಾರ್ಕಸ್ ಸ್ಟೋನಿಸ್ ಅವರು ಬೌನ್ಸರ್‌ಗಳನ್ನು ಎದುರಿಸಲು ಸಾಧ್ಯವಾಗದೆ ಸಮಸ್ಯೆ ಎದುರಿಸಿದರು. ಈ ಕಾರಣದಿಂದಾಗಿ ಮೊದಲ ದಿನದ ಆಟವನ್ನು ಬೇಗನೇ ಕೊನೆಗೊಳಿಸಲಾಯಿತು. 2017ರಲ್ಲಿ ಇಂಗ್ಲೆಂಡ್ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತ್ತು. ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಎಂಸಿಜಿ ಪಿಚ್ ಕಳಪೆ ರೇಟಿಂಗ್ ಪಡೆದಿದೆ.

ಕಳೆದ ವರ್ಷ ಭಾರತದ ಬೌಲರ್‌ಗಳು ಇಲ್ಲಿ ನಡೆದ ಟೆಸ್ಟ್‌ನಲ್ಲಿ ಆತಿಥೇಯ ತಂಡದ ವಿಕೆಟ್‌ಗಳನ್ನು ಉರುಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News