ಜೆಪ್ಪು : ಸ್ಪಂದನ ಟ್ರಸ್ಟ್, ಇನ್ ಫಂಟ್ ಮೇರಿಸ್ ಕಾನ್ವೆಂಟ್ ವತಿಯಿಂದ ವಾರ್ಷಿಕೋತ್ಸವ, ಕ್ರಿಸ್ಮಸ್ ಆಚರಣೆ

Update: 2019-12-09 09:29 GMT

ಮಂಗಳೂರು : ಸ್ಪಂದನ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್ ಆಚರಣೆಯು ಇನ್ ಫಂಟ್ ಮೇರಿಸ್ ಕಾನ್ವೆಂಟಿನ ವಠಾರದಲ್ಲಿ ಶನಿವಾರ ನಡೆಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಗಿನಿ ಮಾರ್ಸೆಲಿನ್ ಬ್ರಾಗ್ಸ್ ವಹಿಸಿ, ಸಂಸ್ಥೆಯ ಕೆಲಸ ಕಾರ್ಯಗಳ ವೈಖರಿಯನ್ನು ಅಭಿನಂದಿಸಿ ಶುಭ ಹಾರೈಸಿದರು. ಕರ್ನಾಟಕ ಕೊಂಕಣಿ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ರೋಯ್ ಕ್ಯಾಸ್ತೆಲಿನೊ ಮಾತನಾಡಿ, ಮಹಿಳೆ ಶಿಕ್ಷಿತಳಾದರೆ, ಆ ಕುಟುಂಬ ಶಿಕ್ಷಿತವಾದಂತೆ ಎಂದು ತಿಳಿಸಿದರು.

ಕೆನರಾ ಕಮ್ಯುನಿಕೇಶನ್ ಸೆಂಟರಿನ ನಿರ್ದೇಶಕ ಫಾ. ರಿಚರ್ಡ್ ಡಿ ಸೋಜಾ ಅಭಿನಂದಿಸಿ, ಕುಟುಂಬಗಳು ಪ್ರೀತಿಯಿಂದ ಬಾಳಿ, ಮಾನವರಾಗಿ ಬದುಕಿ, ಪರರ ಬದುಕಿಗೆ ದಾರಿದೀಪಗಳಾಗೋಣ ಎಂದು ಕ್ರಿಸ್ಮಸ್ ಸಂದೇಶ ನೀಡಿ, ಶುಭ ಹಾರೈಸಿದರು.

ಒಕ್ಕೂಟದ ಅಧ್ಯಕ್ಷರಾದ ಸುಚಿತ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಸ್ಪಂದನ ಟ್ರಸ್ಟಿನ ಆಡಳಿತಾಧಿಕಾರಿ ಭಗಿನಿ ಹೆಲೆನ್ ಪೆರ್ನಾಂಡಿಸ್  ಸ್ವಾಗತಿಸಿದರು.  ಸ್ಪಂದನಾ ಟ್ರಸ್ಟಿನ ಸಂಯೋಜಕ ವಿಕ್ಟರ್ ವಾಸ್ ವರದಿ ವಾಚಿಸಿದರು.

ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಫಳ್ನೀರ್ ವಾರ್ಡಿನ ಕೋರ್ಪರೇಟರ್ ಆಗಿ ವಿಜೇತರಾದ ಜೆಸಿಂತಾ ಆಲ್ ಫ್ರಡ್ ಹಾಗೂ ಪದವು ಗ್ರಾಮದ 21 ನೇ ವಾರ್ಡಿನಲ್ಲಿ ವಿಜೇತರಾದ ವನಿತಾ ಪ್ರಸಾದ್ (ಸ್ವ ಸಹಾಯ ಸಂಘದ ಸದಸ್ಯೆ) ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮಹಿಳಾ ಸ್ವ ಸಹಾಯ ಸಂಘಗಳಲ್ಲಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾ ಯಿತು ಹಾಗೂ ಕಲಿಕೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಸಮಾಜಿಕ ಕಾರ್ಯಕರ್ತರಾದ ತೀರ್ಥ ಅವರು ವಂದಿಸಿದರು.  ತಿಲೋತ್ತಮ ಹಾಗೂ ಕವಿತಾ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿ ವರ್ಗ ಕಾರ್ಯಕ್ರಮವು ಸಾಂಘವಾಗಿ ನೆರವೇರಲು ಶ್ರಮಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News