ರಾಜ್ಯದ ಅಭಿವೃದ್ಧಿಯೇ ಮೂಲ ಮಂತ್ರವಾಗಲಿ: ಚಂದ್ರಶೇಖರ ಸ್ವಾಮೀಜಿ

Update: 2019-12-09 10:03 GMT

ಮುಲ್ಕಿ: ಕರ್ನಾಟಕ ಉಪ ಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಜಯಗಳಿಸಿದ್ದು ಸಂತಸ ತಂದಿದೆ. ಪಕ್ಷ ಜಯಿಸಲು ಕಾರ್ಯಕರ್ತರ ಪರಿಶ್ರಮ ಹಾಗೂ ಮುಖ್ಯಮಂತ್ರಿಯ ಸಾಧನೆ ಅವಿಸ್ಮರಣೀಯ. ಆದರೆ ಈ ಚುನಾವಣೆಯಲ್ಲಿ ಯಾರೂ ಗೆದ್ದಿಲ್ಲ ಯಾರೂ ಸೋತಿಲ್ಲ ಎಂದು ಮನಗಂಡು ರಾಜ್ಯದ ಅಭಿವೃದ್ಧಿಗೆ ಮೂರೂ ಪಕ್ಷಗಳು ಒಟ್ಟಾಗಿ ಶ್ರಮಿಸಬೇಕು ಎಂದು ಬೆಂಗಳೂರಿನ ಅಂತರ್ ರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಅವರು ತಮ್ಮ ಆಶ್ರಮದಲ್ಲಿ ಉಪ ಚುನಾವಣೆಯಲ್ಲಿ ಬಿಜೆಪಿಯ ವಿಜಯೋತ್ಸವದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ, ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಣತೊಟ್ಟಿದ್ದು ಖಂಡಿತಾ ಯಶಸ್ಸು ಸಾಧಿಸುತ್ತಾರೆ. ಇದಕ್ಕೆ ಜನರ ಸಹಕಾರ ಅಗತ್ಯವಿದ್ದು, ಅಭಿವೃದ್ಧಿಯೇ ರಾಜ್ಯ ಸರಕಾರದ ಮೂಲ ಮಂತ್ರವಾಗಲಿ ಎಂದು ಹಾರೈಸಿದರು.

ಈ ಸಂದರ್ಭ ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ ಭಟ್, ಸಂಚಾಲಕರಾದ ವಿಜಯಕುಮಾರ್, ಪುನೀತ ಕೃಷ್ಣ, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News