ಶಾಲಾ ಶಿಕ್ಷಣಕ್ಕೆ ಮೀಸಲಿಟ್ಟ ಬಜೆಟ್ ಮೊತ್ತದಲ್ಲಿ 3,000 ಕೋ.ರೂ. ಕಡಿತಗೊಳಿಸಲಿರುವ ಮೋದಿ ಸರಕಾರ

Update: 2019-12-09 11:11 GMT

ಹೊಸದಿಲ್ಲಿ: ಹಣಕಾಸು ಕೊರತೆ ನೆಪದಲ್ಲಿ ಶಾಲಾ ಶಿಕ್ಷಣಕ್ಕಾಗಿ ಮೀಸಲಿರಿಸಲಾಗುವ ನಿಧಿಯನ್ನು 2019-20 ಸಾಲಿನಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರ 3,000 ಕೋಟಿ ರೂ.ಗಳಷ್ಟು ಕಡಿತಗೊಳಿಸುವ ಸಾಧ್ಯತೆಯಿದೆಯಿದೆಯೆಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಮೂಲಗಳಿಂದ ದೊರೆತ ಮಾಹಿತಿಯನ್ನಾಧರಿಸಿ theprint.in ವರದಿ ಮಾಡಿದೆ.

ಕೇಂದ್ರ ಸರಕಾರ 2019-20 ಆರ್ಥಿಕ ವರ್ಷದಲ್ಲಿ ಶಾಲಾ ಶಿಕ್ಷಣ ಇಲಾಖೆಗೆ 56,536.63 ಕೋಟಿ ರೂ. ಮಂಜೂರುಗೊಳಿಸಿತ್ತು. ಎರಡು ವಾರಗಳ ಹಿಂದೆ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ವಿತ್ತ ಸಚಿವಾಲಯಗಳ ಅಧಿಕಾರಿಗಳ ನಡುವಿನ ಸಭೆಯಲ್ಲಿ ನಿಧಿ ಕಡಿತದ ಕುರಿತಂತೆ ಚರ್ಚಿಸಲಾಯಿತು. ಶಾಲಾ ಶಿಕ್ಷಣಕ್ಕೆ ಮೀಸಲಿರಿಸಿದ ಮೊತ್ತವನ್ನು 3,000 ಕೋಟಿಯಷ್ಟು ಕಡಿತಗೊಳಿಸುವ ಅನಿವಾರ್ಯತೆಯಿದೆಯೆಂದು ವಿತ್ತ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆನ್ನಲಾಗಿದೆ.

ಅನುದಾನ ಕಡಿತಗೊಳಿಸಿದ್ದೇ ಆದಲ್ಲಿ ಹಲವಾರು ಯೋಜನೆಗಳು ಬಾಧಿತವಾಗುವ ಸಾಧ್ಯತೆಯಿದೆ. ಶಾಲಾ ಶಿಕ್ಷಣ ಇಲಾಖೆಯ ಹೆಚ್ಚಿನ ಅನುದಾನ ಕೇಂದ್ರ ಸರಕಾರ ಯೋಜನೆಗಳಾದ ಸಮಗ್ರ ಶಿಕ್ಷಾ ಅಭಿಯಾನಕ್ಕಾಗಿ ಬಳಸಲಾಗುತ್ತದೆ.

ಶಾಲಾ ಶಿಕ್ಷಣಕ್ಕಾಗಿ 2017-18ರಲ್ಲಿ ರೂ 46000 ಕೋಟಿಯಷ್ಟು ಮೊತ್ತ ಮೀಸಲಿರಿಸಲಾಗಿದ್ದರೆ ಮುಂದಿನ ವರ್ಷದಲ್ಲಿ ರೂ 9,000 ಕೋಟಿ ಹೆಚ್ಚುವರಿ ಮೊತ್ತ ಮೀಸಲಿರಿಸಿ ರೂ 56,536 ಕೋಟಿ ನಿಗದಿ ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News