ಡಿ. 11ರಿಂದ ಸುರಿಬೈಲು ಉಸ್ತಾದರ ಆಂಡ್ ನೇರ್ಚೆ

Update: 2019-12-09 11:48 GMT

ವಿಟ್ಲ, ಡಿ. 9: ಬಂಟ್ವಾಳ ತಾಲೂಕಿನ ಸುರಿಬೈಲು ದಾರುಲ್ ಅಶ್‍ಅರಿಯಃ ಎಜುಕೇಶನಲ್ ಸೆಂಟರ್ ಸ್ಥಾಪಕ ಶೈಖುನಾ ಮರ್‍ಹೂಂ ಸುರಿಬೈಲು ಉಸ್ತಾದರ 18ನೇ ಆಂಡ್ ನೇರ್ಚೆ ಹಾಗೂ ಶೈಖುನಾ ಪಿಎ ಉಸ್ತಾದರ ಅನುಸ್ಮರಣೆ, ಹನೀಫಿ ಸನದುದಾನ ಮಹಾ ಸಮ್ಮೇಳನ ಡಿ. 11, 12 ಮತ್ತು 13ರಂದು ನಡೆಯಲಿದೆ ಎಂದು ದಾರುಲ್ ಅಶ್ ಅರಿಯಃದ ಸ್ವಾಗತ ಸಮಿತಿ ಸಂಚಾಲಕ ಕೆ.ಎ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ತಿಳಿಸಿದ್ದಾರೆ.

ಸೋಮವಾರ ವಿಟ್ಲದ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರಿಬೈಲು ದಾರುಲ್ ಅಶ್ ಅರಿಯಃ ಎಜುಕೇಶನಲ್ ಸೆಂಟರ್‍ನಲ್ಲಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ವುಮೆನ್ಸ್ ಕಾಲೇಜು, ಹಿಫುಲ್‍ಳು ಕುರ್ ಆನ್ ಕಾಲೇಜು, ಅನಾಥ ನಿರ್ಗತಿಕರ ಮಂದಿರ ಕಾರ್ಯಾಚರಿಸುತ್ತಿದೆ. ಈ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಉಚಿತವಾಗಿ ಧಾರ್ಮಿಕ ಲೌಕಿಕ, ವಿದ್ಯಾಭ್ಯಾಸ, ಊಟೋಪಾಚಾರ ಮತ್ತು ವಸತಿಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಪ್ರತಿವರ್ಷದಂತೆ ಈ ವರ್ಷವೂ ಡಿ. 11ರಂದು ಸಂಜೆ ಸೈಯದ್ ಶಿಹಾಬುದ್ದೀನ್ ಮದಕ ಅವರ ನೇತೃತ್ವದಲ್ಲಿ ಮರ್‍ಹೂಂ ಸುರಿಬೈಲು ಉಸ್ತಾದರ ಮಕಬರ ಝಿಯಾರತ್ ಕಾರ್ಯಕ್ರಮ ಆರಂಭವಾಗಲಿದೆ. ಕೋಯ ಕಾಪಾಡ್ ಹಾಗೂ ಸಂಗಡಿಗರು ಕೋಝಿಕ್ಕೋಡ್ ಕೇರಳ ಅವರ ನೇತೃತ್ವದಲ್ಲಿ ಮಹ್‍ಳರತು ರಿಫಾಈಯ್ಯ ಮಜ್ಲೀಸ್, ಜಲಾಲಿಯ್ಯ ರಾತೀಬು ನಡೆಯಲಿದೆ ಎಂದು ಅವರು ತಿಳಿಸಿದರು.

ಡಿ. 12ರಂದು ಬೆಳಗ್ಗೆ 10 ಗಂಟೆಗೆ ಉಚಿತ ವೈದ್ಯಕೀಯ ಶಿಬಿರ, ಸಂಜೆ 6 ಗಂಟೆಗೆ ಸೌಹಾರ್ದ ಸಂಗಮ, ರಾತ್ರಿ 8 ಗಂಟೆಗೆ ಬಾಯಾರು ತಂಙಳ್ ಅವರ ನೇತೃತ್ವದಲ್ಲಿ ಆತ್ಮೀಯ ಮಜ್ಲೀಸ್ ನಡೆಯಲಿದೆ. ಡಿ. 13ರಂದು ಮಧ್ಯಾಹ್ನ ಸೈಯದ್ ಕುಂಬೋಳ್ ತಂಙಳ್ ಅವರ ನೇತೃತ್ವದಲ್ಲಿ ವಸ್ತ್ರ ವಿತರಣೆ,  ಸಂಜೆ 4 ಗಂಟೆಗೆ ಬೋಳಂತೂರುನಿಂದ ಅಶ್ ಅರಿಯಕ್ಕೆ ಸಂದಲ್ ಮೆರವಣಿಗೆ ಬಳಿಕ ಸಮಾರೋಪ ಸಮ್ಮೇಳನದಲ್ಲಿ ಕೂರ ತಂಙಳ್ ನೇತೃತ್ವ ನೀಡಲಿದ್ದು, ಮೌಲನಾ ಪೆರೋಡ್ ಅಬ್ದುಲ್ ರಹಿಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭ  ಶೈಖುನಾ ಅಲಿಕುಂಞ ಉಸ್ತಾದ್, ಬೇಕಲ ಉಸ್ತಾದ್, ಮಾಣಿ ಉಸ್ತಾದ್, ಕಾವಳಕಟ್ಟೆ ಹಝ್ರತ್, ಮಹ್‍ಮೂದುಲ್ ಫೈಝಿ ವಾಲೆಮುಂಡೋವು ಉಸ್ತಾದ್, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಯು.ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ಜಿಪಂ ಸದಸ್ಯ ಎಂ.ಎಸ್ ಮುಹಮ್ಮದ್, ಯೇನೆಪೋಯ ಅಬ್ದುಲ್ಲ ಕುಂಞಿ, ಅಬ್ದುಲ್ ರಶೀದ್ ಝೈನಿ, ಶಾಫಿ ಸಅದಿ ಬೆಂಗಳೂರು, ಭಾಗವಹಿಸಲಿದ್ದಾರೆ. ಸಿ.ಎಚ್ ಮುಹಮ್ಮದಾಲಿ ಸಖಾಫಿ ಹಾಗೂ ಇಬ್ರಾಹಿಂ ಸಖಾಪಿ ಸೆರ್ಕಳ ವಿವಿಧ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದರು. 

ಸುದ್ದಿಗೋಷ್ಠಿಯಲ್ಲಿ ದಾರುಲ್ ಅಶ್ ಅರಿಯಃದ ಸದಸ್ಯರಾದ ಅಬ್ದುಲ್ ರಶೀದ್ ಹನೀಫಿ, ಅಬ್ದುಲ್ ವಾಜೀದ್ ಹನೀಫಿ, ಪ್ರಚಾರ ಸಮಿತಿಯ ಯು.ಎಸ್ ಉಸ್ಮಾನ್ ಹಾಜಿ, ಎಸ್‍ಎಂ ಉಮರ್ ಬಾಕಿಮಾರ್, ಸಿದ್ದೀಕ್ ಕುಕ್ಕಾಜೆ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News