ತುಂಬೆ ಕಾಲೇಜಿನ 31ನೇ ವಾರ್ಷಿಕೋತ್ಸವ

Update: 2019-12-09 11:53 GMT

ಬಂಟ್ವಾಳ, ಡಿ. 9: ನಮ್ಮ ವರ್ತನೆ ಹಾಗೂ ನಡತೆಗಳನ್ನು ನೋಡಿಯೇ ಮಕ್ಕಳು ಕಲಿಯುವ ಅಂಶವನ್ನು ಗಮನದಲ್ಲಿರಿಸಿ ನಾವು ಮೊದಲು ಆದರ್ಶರಾಗಬೇಕಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್‍ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಹೇಳಿದ್ದಾರೆ.

ಅವರು ತುಂಬೆ ಪದವಿ-ಪೂರ್ವ ಕಾಲೇಜಿನ 31ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಇದೇ ಸಂದರ್ಭ ವಗ್ಗ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ, ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಶೇಖ್ ಆದಂ ಸಾಹೇಬ್ ಅವರನ್ನು ಧರ್ಮದರ್ಶಿ ಬಿ. ಅಬ್ದುಲ್ ಸಲಾಂ ಸನ್ಮಾನಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ ಮಾತನಾಡಿ, ಜ್ಞಾನವೇ ಎಲ್ಲದ್ದಕ್ಕೂ ಮೂಲ. ಎಲ್ಲ ಅಭಿವೃದ್ಧಿಯೂ ಜ್ಞಾನದಿಂದಲೇ ಸಾಧ್ಯ ಎಂದರು. ತುಂಬೆ ಕಾಲೇಜಿನ ಪ್ರಾಚಾರ್ಯ ಕೆ. ಎನ್. ಗಂಗಾಧರ ಆಳ್ವ ವರದಿ ವಾಚಿಸಿದರು.

ಇದೇ ಸಂದರ್ಭ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದಾರ್ಥಿಗಳಾದ ಮುಹಮ್ಮದ್ ಶರಫ್, ಅಫ್ರಾಝ್ ರಹಿಮಾನ್, ಮುಹಮ್ಮದ್ ಶಹೀರ್, ಮುಹಮ್ಮದ್ ಶಫೀಕ್, ಮುಹಮ್ಮದ್ ಸುಹಾನ್ ಪ್ರಥಮ ವಾಣಿಜ್ಯ ವಿಭಾಗ ಇವರನ್ನು ಗೌರವಿಸಲಾಯಿತು.

ಕಳೆದ ಶೈಕ್ಷಣಿಕ ಸಾಲಿನ ಪ್ರಥಮ ಸ್ಥಾನದ ವಿದ್ಯಾಥಿಗಳಾದ ರೋಹಿತ್ ಎಸ್. ಹೊಳ್ಳ, ಕೀರ್ತನಾ ಲಾಲಸ, ಆಯಿಷಾ ಶಿಬಾನಾ ಎಸ್. ಬಿ., ಸಂತೋಷ್ ಇವರನ್ನು ಗುರುತಿಸಲಾಯಿತು. ಬಿ. ಅಬ್ದುಲ್ ಕಬೀರ್ ಅವರು ಪುರಸ್ಕೃತರನ್ನು ಪರಿಚಯಿಸಿದರು. 

ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸ್ಪರ್ಧಾ ವಿಜೇತ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಅಭಿನಂದಿಸಲಾಯಿತು. ವಿದ್ಯಾ ಕೆ., ವೀರಪ್ಪ ಗೌಡ, ಕವಿತಾ ಕೆ. ಅವರು ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.

ಕಾಲೇಜಿನ ಸಂಚಾಲಕ ಬಸ್ತಿ ವಾಮನ ಶೆಣೈ, ಪಿಟಿಎ. ಅಧ್ಯಕ್ಷ ಬಶೀರ್ ತಂಡೇಲ್, ಉಪಾಧ್ಯಕ್ಷ ನಿಸಾರ್ ಅಹ್ಮದ್, ವಿದ್ಯಾರ್ಥಿ ನಾಯಕ-ನಾಯಕಿಯರಾದ ಮುಹಮ್ಮದ್ ಮುಝಾಮ್ಮಿಲ್, ಹೀನಾ, ಮುಹಮ್ಮದ್ ಸುಝದ್, ಅಸಿಲಾಹ, ಮುಹಮ್ಮದ್ ಅಝ್ಮಾನ್ ಹಾಗೂ ಅಸ್ನಾ ಮೆಹರಾಜ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ನಾಯಕ್, ಚಿತ್ರಕಲಾ ಶಿಕ್ಷಕ ದೇವದಾಸ್ ಕೆ. ಸಹಕರಿಸಿದರು. ವಿದ್ಯಾರ್ಥಿ ಅಬ್ದುಲ್ ಸಲಾಂ ಕಿರಾತ್ ಓದಿದರು.  ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ ಮೊಲಿಗೆ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಕೆದಿಲ ವಂದಿಸಿದರು. ವಿ.ಎಸ್. ಭಟ್ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News