ಶ್ರೀನಿವಾಸ ಫಾರ್ಮಸಿ ಕಾಲೇಜಿನಲ್ಲಿ ವಿಚಾರಸಂಕಿರಣ

Update: 2019-12-09 11:59 GMT

ಮಂಗಳೂರು : ವಳಚ್ಚಿಲ್‍ನಲ್ಲಿರುವ ಶ್ರೀನಿವಾಸ  ಫಾರ್ಮಸಿ ಕಾಲೇಜ್, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್, ದ.ಕ ಸ್ಥಳೀಯ ಶಾಖೆ, ಮಂಗಳೂರು  ಇವರ ಸಹಯೋಗದೊಂದಿಗೆ "ಹರ್ಬಲ್ ಡ್ರಗ್ ರಿಸರ್ಚ್-ಅಪಾರ್ಚುನೆಟೀಸ್ ಆಂಡ್ ಚಾಲೆಂಜಸ್"  ಎಂಬ ವಿಷಯದಲ್ಲಿ ರಾಷ್ಟ್ರೀಯ ವಿಚಾರಸಂಕಿರಣ ಸೋಮವಾರ ಆಯೋಜಿಸಲಾಯಿತು.

ಈ ವಿಚಾರಸಂಕಿರಣವನ್ನು ಗೋವಾ ಕಾಲೇಜ್ ಆಫ್ ಫಾರ್ಮಸಿ ಪ್ರೊ. ಡಾ. ಅರುಣ್ ಬಿ.ಜೋಶಿ ಕಾರ್ಯಕ್ರಮ ಉದ್ಘಾಟಿಸಿ ಸಂಶೋಧನೆಯ ಸಾಫಲ್ಯಕ್ಕೆ ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡಿದ ಪ್ರಯತ್ನವು ಅತ್ಯಗತ್ಯ ಎಂದು ಹೇಳಿದರು.

ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿ ಅಧ್ಯಕ್ಷ  ಡಾ.ಎ.ಆರ್. ಶಬರಾಯ ಮಾತನಾಡಿ ಪ್ರಪಂಚದ ಆರೋಗ್ಯ ಕ್ಷೇತ್ರಕ್ಕೆ ಸಸ್ಯ ಔಷಧ ಕ್ಷೇತದ ಕೊಡುಗೆಯು ಅಪಾರ. ವಿದ್ಯಾರ್ಥಿಗಳು ತಮ್ಮ ಬುದ್ಧಿ, ಕುಶಲತೆಗಳನ್ನು ಅಳವಡಿಸಿಕೊಂಡು ಔಷಧೀಯ ಸಸ್ಯಗಳಿಂದ ಸಂಶೋಧನೆಯನ್ನು ಮಾಡಬೇಕೆಂದು ಕರೆಯಿತ್ತರು.

ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಎ.ಜೆ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಂಡ್ ರಿಸರ್ಚ್ ಸೆಂಟರ್‍ನ ಫಾರ್ಮಕಾಲಜಿ ವಿಭಾಗದ ಡಾ. ಚಂದ್ರಶೇಖರ್ ಆರ್ ಮಾತನಾಡಿದರು.

ಮೂಡಬಿದ್ರೆ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ.ರವಿರಾವ್ ಎಸ್ ಇವರು ರೋಲ್ ಆಫ್ ಎಥೆನೋಮೆಡಿಸಿನ್ ಇನ್ ಹರ್ಬಲ್ ಡ್ರಗ್ ರಿಸರ್ಚ್ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. 

ವಿಚಾರ ಸಂಕಿರಣದ ಸಂಯೋಜಕರಾದ ಡಾ. ಯು. ಶ್ರೀನಿವಾಸ್  ಸ್ವಾಗತಿಸಿದರು. ಚಾರುತ ರೆಜಿ ಮತ್ತು ಕೀರ್ತನ  ಕಾರ್ಯಕ್ರಮ ನಿರೂಪಿಸಿದರು. ಡಾ.ಕೃಷ್ಣಾನಂದ ಕಾಮತ್ ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News