ಮೊವಾಡಿ ದೇವಸ್ಥಾನಕ್ಕೆ ನುಗ್ಗಿ ಕಳವು

Update: 2019-12-09 16:07 GMT

ಗಂಗೊಳ್ಳಿ, ಡಿ.9: ತ್ರಾಸಿ ಗ್ರಾಮದ ಮೊವಾಡಿ ಕಲ್ಯಾಣಿ ಹೊಂಡ ಎಂಬಲ್ಲಿನ ಶ್ರೀಚೌಡೇಶ್ವರಿ ದೇವಸ್ಥಾನಕ್ಕೆ ಡಿ.8ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು, ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ.

ದೇವಸ್ಥಾನದ ಮುಖ್ಯದ್ವಾರ ಹಾಗೂ ಗರ್ಭಗುಡಿಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ದೇವರ ಮೂರ್ತಿಯಲ್ಲಿದ್ದ 5,000 ರೂ. ಮೌಲ್ಯದ ಚಿನ್ನದ ತಾಳಿ ಇರುವ ಬೆಳ್ಳಿಯ ಕರಿಮಣಿ ಸರ, 5,000ರೂ. ಮೌಲ್ಯದ ಚಿನ್ನದ ಮೂಗುತಿ ಮತ್ತು ದೇವಸ್ಥಾನದ ಕಾಣಿಕೆ ಹುಂಡಿಗಳ ಬೀಗ ಒಡೆದು ಅದರಲ್ಲಿದ್ದ 5,000 ರೂ.ವನ್ನು ಕಳವು ಮಾಡಿದ್ದಾರೆಂದು ದೂರಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News