ಕಬಕ: ಪೌರ ಸನ್ಮಾನ ಹಾಗೂ ಬೃಹತ್ ಸುನ್ನೀ ಸಮ್ಮೇಳನದ ಸ್ವಾಗತ ಸಮಿತಿ ರಚನೆ

Update: 2019-12-09 16:41 GMT
ಆದಂ ಹಾಜಿ- ಝುಬೈರ್- ಬಶೀರ್ ಹಾಜಿ- ಅಬ್ದುರ್ರಹ್ಮಾನ್ ಹಾಜಿ

ಪುತ್ತೂರು, ಡಿ.9: ಸೇವಾ ರಂಗದಲ್ಲಿ 50 ವರ್ಷ ಪೂರೈಸಿದ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, 30ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ದಾರುಲ್ ಇರ್ಷಾದ್ ಸಂಸ್ಥೆಯ ಶಿಲ್ಪಿ ಝೈನುಲ್ ಉಲಮಾರಿಗೆ ಪೌರ ಸನ್ಮಾನ ಹಾಗೂ ಬೃಹತ್ ಸುನ್ನೀ ಸಮಾವೇಶ ಜನವರಿ 2 ರಂದು ಕಬದಕದಲ್ಲಿ ನಡೆಯಲಿದ್ದು, ಸಮಾವೇಶದ ಸ್ವಾಗತ ಸಮಿತಿಯನ್ನು ಇಂದು ಕೆ.ಜಿ.ಎನ್ ಮಿತ್ತೂರು ಕ್ಯಾಂಪಸ್ ರಚಿಸಲಾಯಿತು.

ಸ್ವಾಗತ ಸಮಿತಿ ಗೌರಾವಾಧ್ಯಕ್ಷರಾಗಿ ಇಬ್ರಾಹಿಂ ಫೈಝೀ ಕನ್ಯಾನ, ಚೆಯರ್ಮ್ಯಾನ್ ಆಗಿ ಆದಂ ಹಾಜಿ ಪಡೀಲ್, ಕನ್ವೀನರಾಗಿ ಝುಬೈರ್ ಭ್ರೈಟ್ ಪೋಳ್ಯ, ಕೋಶಾಧಿಕಾರಿಯಾಗಿ ಬಶೀರ್ ಹಾಜಿ ಶೇಕಮಲೆ, ವೈಸ್ ಚೆಯರ್ಮ್ಯಾನ್ ಗಳಾಗಿ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ, ಹಸೈನಾರ್ ಹಾಜಿ ಕೊಡಿಪ್ಪಾಡಿ, ಇಸ್ಮಾಯಿಲ್ ಹಾಜಿ ಬೈತಡ್ಕ ಹಾಗೂ ವೈಸ್ ಕನ್ವೀನರ್ ಗಳಾಗಿ ಶರೀಫ್ ಸಖಾಫಿ ಮಾಣಿ, ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಶಾಹುಲ್ ಹಮೀದ್ ಕಬಕ ಹಾಗೂ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News